Publish Date: Wed, 20 Sep 2023 (09:30 IST)
Updated Date: Wed, 20 Sep 2023 (09:31 IST)
ಲಂಡನ್: ಟೀಂ ಇಂಡಿಯಾ ಟೆಸ್ಟ್ ಆಟಗಾರ ಚೇತೇಶ್ವರ ಪೂಜಾರ ಕೌಂಟಿ ಕ್ರಿಕೆಟ್ ನಲ್ಲಿ ಒಂದು ಪಂದ್ಯದ ನಿಷೇಧ ಶಿಕ್ಷೆಗೊಳಗಾಗಿದ್ದಾರೆ.
ಬಹು ಸೌಮ್ಯ, ಸಭ್ಯ ಆಟಗಾರ ಎಂಬ ಹಿರಿಮೆ ಹೊಂದಿರುವ ಚೇತೇಶ್ವರ ಪೂಜಾರಗೆ ಶಿಕ್ಷೆ ಸಿಕ್ಕಿದ್ದು ಹೇಗೆ ಎಂದು ಎಲ್ಲರಿಗೂ ಅಚ್ಚರಿಯಾಗಬಹುದು. ಆದರೆ ಈ ಶಿಕ್ಷೆ ಅವರು ಮಾಡಿದ ತಪ್ಪಿಗಲ್ಲ!
ಪೂಜಾರ ಕೌಂಟಿ ಕ್ರಿಕೆಟ್ ನಲ್ಲಿ ಸಸೆಕ್ಸ್ ತಂಡದ ನಾಯಕರಾಗಿದ್ದಾರೆ. ಪಂದ್ಯ ನಡುವೆ ಅವರ ತಂಡದ ಇಬ್ಬರು ಆಟಗಾರರು ಅಶಿಸ್ತಿನ ವರ್ತನೆ ತೋರಿದ್ದರು. ಅವರನ್ನು ನಿಯಂತ್ರಿಸಲು ವಿಫಲರಾಗಿದ್ದಕ್ಕೆ ಪೂಜಾರಗೆ ಶಿಕ್ಷೆ ದೊರಕಿದೆ! ಇದೀಗ ಪೂಜಾರ ಮುಂದಿನ ಪಂದ್ಯ ಆಡುವಂತಿಲ್ಲ.