ಮೆಲ್ಬೋರ್ನ್: ವಿರಾಟ್ ಕೊಹ್ಲಿ ಇಲ್ಲದೇ ಹೋದರೆ ಭಾರತದ ಬ್ಯಾಟಿಂಗ್ ಕತೆ ಏನಾಗಬಹುದೋ ಎಂದು ಆತಂಕ ವ್ಯಕ್ತಪಡಿಸಿದ್ದವರಿಗೆ ಹಂಗಾಮಿ ನಾಯಕ ಅಜಿಂಕ್ಯಾ ರೆಹಾನೆ ಮತ್ತು ರವೀಂದ್ರ ಜಡೇಜಾ ಸರಿಯಾದ ಉತ್ತರ ನೀಡಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಭಾರತ 5 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿದ್ದು, 82 ರನ್ ಗಳ ಮಹತ್ವದ ಮುನ್ನಡೆ ಸಾಧಿಸಿದೆ. ಇದೀಗ ಮಳೆ ಸುರಿಯಲಾರಂಭಿಸಿದ್ದು, ಆಟ ಇಂದಿನ ದಿನಕ್ಕೆ ಸ್ಥಗಿತಗೊಂಡಿದೆ. ಈ ನಡುವೆ ನಾಯಕನ ಆಟವಾಡಿದ ಅಜಿಂಕ್ಯಾ ರೆಹಾನೆ ಭರ್ಜರಿ ಶತಕ ಗಳಿಸಿದ್ದಾರೆ. 104 ರನ್ ಗಳಿಸಿರುವ ಅವರಿಗೆ ರವೀಂದ್ರ ಜಡೇಜಾ 40 ರನ್ ಗಳಿಸಿ ಉತ್ತಮ ಸಾಥ್ ನೀಡುತ್ತಿದ್ದಾರೆ. ಇವರಿಬ್ಬರ ಜೊತೆಯಾಟದಿಂದಾಗಿ ಭಾರತ ಬೃಹತ್ ಮುನ್ನಡೆಯತ್ತ ಸಾಗುತ್ತಿದೆ. ನಾಳೆ, ಇವರಿಬ್ಬರ ಜೋಡಿ ಎಷ್ಟು ರನ್ ಗಳಿಸುತ್ತದೋ ಅಷ್ಟು ಭಾರತಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ.