Webdunia - Bharat's app for daily news and videos

Install App

ಹರ್ಲೀನ್‌ ಅಬ್ಬರಕ್ಕೆ ಬೆಚ್ಚಿದ ಕ್ಯಾಪಿಟಲ್ಸ್‌: ಆರ್‌ಸಿಬಿ ತಂಡದ ನಾಕೌಟ್‌ ಕನಸು ಮತ್ತಷ್ಟು ಕಠಿಣ

Sampriya
ಶುಕ್ರವಾರ, 7 ಮಾರ್ಚ್ 2025 (23:54 IST)
Photo Courtesy X
ಲಖನೌ (ಪಿಟಿಐ): ಗುಜರಾತ್‌ ಜೈಂಟ್ಸ್ ತಂಡವು ಮಹಿಳಾ ಪ್ರೀಮಿಯರ್‌ ಲೀಗ್‌ನ ರೋಚಕ ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮಣಿಸಿ ನೌಕೌಟ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿತು.

ಹರ್ಲೀನ್‌ ಡಿಯೊಲ್‌ (70;49ಎಸೆತ, 4x9, 6x1) ಅವರ ಬ್ಯಾಟಿಂಗ್‌ ನೆರವಿನಿಂದ ಜೈಂಟ್ಸ್‌ ತಂಡ ಡೆಲ್ಲಿ ತಂಡವನ್ನು ಮಣಿಸಿತು. ಇದರಿಂದಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಕೌಟ್‌ ಕನಸು ಮತ್ತಷ್ಟು ಜಟಿಲವಾಯಿತು.

ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 177 ರನ್‌ ಕಲೆ ಹಾಕಿತು. ಸವಾಲಿನ ಮೊತ್ತ ಬೆನ್ನತ್ತಿದ ಗುಜರಾತ್‌ ಜೈಂಟ್ಸ್‌ತಂಡ 19.3 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 178 ರನ್‌ ಗಳಿಸಿತು.

178 ರನ್‌ಗಳ ಸವಾಲಿನ ಮೊತ್ತ ಬೆನ್ನತ್ತಿದ ಗುಜರಾತ್‌ ಜೈಂಟ್ಸ್‌ ತಂಡ ಹೇಮಲತಾ ದಯಾಳನ್ (1ರನ್‌) ಅವರ ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಬೆತ್‌ ಮೂನಿ ಜೊತೆಗೂಡಿದ ಹರ್ಲಿನ್‌ ಡಿಯೊಲ್‌ ಎರಡನೇ ವಿಕೆಟ್‌ಗೆ 85 ರನ್‌ಗಳ ಜೊತೆಯಾಟ ನೀಡಿ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದರು.

ಶನಿವಾರದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಯು.ಪಿ ವಾರಿಯರ್ಸ್‌ ತಂಡವನ್ನು ಎದುರಿಸಲಿದೆ. ವಾರಿಯರ್ಸ್‌ ತಂಡವು ಈಗಾಗಲೇ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿದೆ. ನಾಕೌಟ್‌ ಕನಸು ಜೀವಂತವಾಗಿ ಉಳಿಯಲು ಆರ್‌ಸಿಬಿ ನಾಳಿನ ಪಂದ್ಯ ಗೆಲ್ಲಲೇಬೇಕಿದೆ.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

GT vs SRH Match: ಗುಜರಾತ್ ಟೈಟನ್ಸ್ ವಿರುದ್ಧ ಟಾಸ್‌ ಗೆದ್ದ ಹೈದರಾಬಾದ್‌

ಮತ್ತೇ ಪ್ರೀತಿಯಲ್ಲಿ ಬಿದ್ದ ಶಿಖರ್ ಧವನ್, ಕೊನೆಗೂ ತನ್ನ ಪ್ರೀತಿಯನ್ನು ಒಪ್ಪಿಕೊಂಡ ಮಾಜಿ ಕ್ರಿಕೆಟರ್‌

ಮಾಜಿ ಕ್ರಿಕೆಟರ್‌ S Sreesanth ಗೆ ಭಾರೀ ಆಘಾತ, ಕಾರಣ ಹೀಗಿದೆ

Funny video: ಬಾಲ್ ಎಲ್ಲಿ ಹೋಯ್ತಪ್ಪಾ.. ಗಲ್ಲಿ ಕ್ರಿಕೆಟ್ ಹುಡುಗನಂತೆ ಚೆಂಡು ಹುಡುಕಿದ ಸೂರ್ಯಕುಮಾರ್ ಯಾದವ್

Rohit Sharma: ರೋಹಿತ್ ಶರ್ಮಾ ಕಾಲು ಹಿಡಿದ ಬಾಲ್ ಬಾಯ್: ಹಿಟ್ ಮ್ಯಾನ್ ರಿಯಾಕ್ಷನ್ ವಿಡಿಯೋ ನೋಡಿ

ಮುಂದಿನ ಸುದ್ದಿ
Show comments