Publish Date: Mon, 24 Apr 2017 (12:00 IST)
Updated Date: Mon, 24 Apr 2017 (12:05 IST)
ಕೋಲ್ಕೊತ್ತಾ: ಭಾರತದಲ್ಲಿ ಕ್ರಿಕೆಟ್ ಹುಚ್ಚು ಎಂತಹಾ ದುರ್ಗತಿಗೆ ಇಳಿಸುತ್ತದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ. ಗಲ್ಲಿ ಕ್ರಿಕೆಟ್ ನಲ್ಲಿ 250 ರೂ.ಗಳ ಬೆಟ್ಟಿಂಗ್ ಗಾಗಿ 12 ವರ್ಷದ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ.
ಪಶ್ಚಿಮ ಬಂಗಾಲದ ಹೌರಾದಲ್ಲಿ ಈ ಧಾರುಣ ಘಟನೆ ನಡೆದಿದೆ. ಆರೋಪಿ ಹಾಗೂ ಕೊಲೆಗೀಡಾದ ಬಾಲಕನ ನಡುವೆ ಗೆದ್ದವರಿಗೆ 250 ರೂ. ನೀಡುವುದಾಗಿ ಬೆಟ್ ನಡೆದಿತ್ತು. ಅದರಂತೆ ಬಾಲಕ ಸವಾಲು ಗೆದ್ದರೂ, ಆರೋಪಿ ಹಣ ನೀಡದೇ ಇದ್ದಾಗ ಜಗಳ ತಾರಕಕ್ಕೇರಿತು. ಇದು ಕೊಲೆಯಲ್ಲಿ ಅಂತ್ಯವಾಯಿತು.
ಬಾಲಕನನ್ನು ಹೊಡೆದು ಕೊಲೆ ಮಾಡಿದ ಆರೋಪಿ ನಂತರ ಆತನನ್ನು ಪಕ್ಕದ ಕಾಡಿನಲ್ಲಿ ಎಸೆದು ಪರಾರಿಯಾಗಿದ್ದ. ಇದೀಗ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ