Publish Date: Mon, 24 Apr 2017 (11:34 IST)
Updated Date: Mon, 24 Apr 2017 (11:36 IST)
ಮುಂಬೈ: ಐಪಿಎಲ್ ಪಂದ್ಯ ಮುಗಿದ ತಕ್ಷಣ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ನಡೆಯಲಿದೆ. ಇದಕ್ಕಾಗಿ ನಾಳೆಯೊಳಗೆ ಟೀಂ ಇಂಡಿಯಾ ಆಯ್ಕೆ ನಡೆಯಬೇಕಿದೆ. ಹೀಗಾಗಿ ಯಾರು ತಂಡದಲ್ಲಿ ಉಳಿಯುತ್ತಾರೆ ಎನ್ನುವ ಕುತೂಹಲ ಪ್ರಾರಂಭವಾಗಿದೆ.
ಐಸಿಸಿ ಎಲ್ಲಾ ತಂಡಗಳಿಗೆ ತಮ್ಮ ಆಟಗಾರರನ್ನು ಆಯ್ಕೆ ಮಾಡಲು ನಾಳೆಯವರೆಗೆ ಕಾಲಾವಕಾಶ ನೀಡಿದೆ. ಟೀಂ ಇಂಡಿಯಾದಲ್ಲಿ ಈಗ ಎಲ್ಲಕ್ಕಿಂತ ಹೆಚ್ಚು ವೇಗಿಗಳ ಆಯ್ಕೆಯೇ ಆಯ್ಕೆಗಾರರಿಗೆ ತಲೆ ನೋವಾಗಲಿದೆ. ಮೊಹಮ್ಮದ್ ಶಮಿ ಚೇತರಿಸಿಕೊಂಡಿದ್ದು ಒಂದೆಡೆಯಾದರೆ, ಇನ್ನೊಂದೆಡೆ ಹಿರಿಯ ವೇಗಿ ಆಶಿಷ್ ನೆಹ್ರಾರನ್ನು ಕೈ ಬಿಡುವುದು ಹೇಗೆಂಬ ಚಿಂತೆ. ಹೀಗಾಗಿ ಇವರಿಬ್ಬರ ನಡುವೆ ಪೈಪೋಟಿ ಏರ್ಪಡಲಿದೆ.
ಮತ್ತೊಂದೆಡೆ ಖಾಯಂ ಆರಂಭಿಕ ಕೆ ಎಲ್ ರಾಹುಲ್ ಗಾಯಗೊಂಡಿರುವುದರಿಂದ ಅವರ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡುತ್ತಾರೆ ಎನ್ನುವುದು ಸದ್ಯದ ಕುತೂಹಲ. ಅದಕ್ಕಿಂತ ಮೊದಲು ಬಿಸಿಸಿಐ ಮತ್ತು ಐಸಿಸಿ ನಡುವೆ ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಮುನಿಸು ಸರಿಯಬೇಕಿದೆ. ಹೀಗಾಗಿಯೇ ಭಾರತ ಇದುವರೆಗೆ ತನ್ನ ತಂಡ ಆಯ್ಕೆ ಮಾಡುವ ಸುದ್ದಿಯೆತ್ತಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ