ಬಿಸಿಸಿಐ ಮಾಜಿ ಅಧ್ಯಕ್ಷ ಶಶಾಂಕ್ ಮನೋಹರ್ ಅವರು ಐಸಿಸಿಯ ಪ್ರಥಮ ಸ್ವತಂತ್ರ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಗೌರವಿಸಲಿದ್ದು, ಅವರ ಗೌರವಾರ್ಥ ಭೋಜನಕೂಟದ ಸಮಾರಂಭ ಏರ್ಪಡಿಸಲಾಗಿದೆ. ಮೇ 22ರಂದು ಎಲ್ಲಾ ಸದಸ್ಯರು ಭೋಜನಕೂಟಕ್ಕೆ ಹಾಜರಾಗಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.
ಮನೋಹರ್ ಬಿಸಿಸಿಐ ಅಧ್ಯಕ್ಷ ಪದವಿಗೆ ಎರಡನೇ ಬಾರಿಗೆ ಏರಿದ 6 ತಿಂಗಳಲ್ಲೇ ರಾಜೀನಾಮೆ ನೀಡಿದ್ದಾರೆ. ಐಸಿಸಿಯ ಮೊದಲ ಸ್ವತಂತ್ರ ಅಧ್ಯಕ್ಷರಾಗಿ ಅರ್ಹತೆ ಪಡೆಯಲು ಅವರು ರಾಜೀನಾಮೆ ನೀಡಿದರು.
ಮನೋಹರ್ ಅವರ ಉತ್ತರಾಧಿಕಾರಿಯನ್ನು ಭಾನುವಾರ ಎಸ್‌ಜಿಎಂನಲ್ಲಿ ಆಯ್ಕೆಮಾಡಲಾಗುತ್ತಿದ್ದು, ಅದಕ್ಕೆ ಮುಂಚೂಣಿಯಲ್ಲಿ ಪ್ರಸಕ್ತ ಕಾರ್ಯದರ್ಶಿ ಅನುರಾಗ್ ಠಾಕೂರ್ ಇದ್ದಾರೆ.
ಹೊಸ ಬಿಸಿಸಿಐ ಅಧ್ಯಕ್ಷರಾಗಲು ಠಾಕುರ್ ತಮ್ಮ ಪ್ರಸಕ್ತ ಹುದ್ದೆಯನ್ನು ತೊರೆಯಬೇಕು. ಆಗ ಎಸ್‌ಜಿಎಂನಲ್ಲಿ ಹೊಸ ಬಿಸಿಸಿಐ ಕಾರ್ಯದರ್ಶಿಯ ಹೆಸರನ್ನು ನಾಮಕರಣ ಮಾಡಲಾಗುತ್ತದೆ.