Select Your Language

Notifications

webdunia
webdunia
webdunia
webdunia

ಮಹಿಳಾ ಆಟಗಾರ್ತಿಯರಿಗೆ ಐಪಿಎಲ್ ಮಾದರಿ ಟಿ 20 ಲೀಗ್ : ಬಿಸಿಸಿಐ ಚಿಂತನೆ

ಮಹಿಳಾ ಆಟಗಾರ್ತಿಯರಿಗೆ ಐಪಿಎಲ್ ಮಾದರಿ ಟಿ 20 ಲೀಗ್ :  ಬಿಸಿಸಿಐ ಚಿಂತನೆ
ನವದೆಹಲಿ , ಬುಧವಾರ, 15 ಜೂನ್ 2016 (13:42 IST)
ಪುರುಷರ ಐಪಿಎಲ್‌ಗೆ ಸಮಾನವಾದ ಮಹಿಳಾ ಟಿ 20 ಲೀಗ್ ಆರಂಭಿಸಲು ಬಿಸಿಸಿಐ ಯೋಚಿಸುತ್ತಿದೆ. ಬಿಗ್ ಬ್ಯಾಷ್ ಲೀಗ್ ಮಹಿಳಾ ಆವೃತ್ತಿಯಲ್ಲಿ ಭಾಗವಹಿಸಲು ಭಾರತೀಯ ಮಹಿಳಾ ಕ್ರಿಕೆಟರುಗಳಿಗೆ ಅನುಮತಿ ನೀಡಿದ ಬಳಿಕ, ಬಿಸಿಸಿಐ ತನ್ನದೇ ಆದ ಲೀಗ್ ಹೊಂದುವ ಕುರಿತು ಯೋಚಿಸುತ್ತಿದೆ. 
 
ನೂತನವಾಗಿ ನೇಮಕವಾದ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕುರ್ ಕ್ರಿಕೆಟ್ ಆಟವನ್ನು ಜನಪ್ರಿಯಗೊಳಿಸಲು ವಿಸ್ತೃತ ಯೋಜನೆಗಳನ್ನು ಹೊಂದಿದ್ದು, ಮಂಡಳಿಯು ಕಳೆದ ಕೆಲವು ದಿನಗಳಲ್ಲಿ ಮಹಿಳಾ ತಂಡಕ್ಕೆ ನೆರವಾಗಲು ನವೀನ ಯೋಜನೆಗಳನ್ನು ಹಮ್ಮಿಕೊಂಡಿದೆ. 
 
ಭಾರತದ ಮಹಿಳಾ ಕ್ರಿಕೆಟ್ ಬೆಳೆದು 2020ರೊಳಗೆ ನಂಬರ್ ಒನ್ ಸ್ಥಾನವನ್ನು ಮುಟ್ಟಲು ಬಿಸಿಸಿಐ ಬಯಸಿದೆ. ಮುಂದಿನ ಐದು ವರ್ಷಗಳಿಗೆ ಶಿಫಾರಸುಗಳನ್ನು ನೀಡುವಂತೆ ಮಹಿಳಾ ಕಾರ್ಯಕಾರಿ ಸಮಿತಿಗೆ ನಾವು ಕೇಳಿದ್ದೇವೆ ಎಂದು ಠಾಕುರ್ ಹೇಳಿದರು. 
ಮಹಿಳೆಯರ ಟಿ 20 ಲೀಗ್ ಹೊಂದುವ ಕುರಿತ ಕಲ್ಪನೆ ಖಂಡಿತವಾಗಿ ಮೊಳಕೆಯೊಡೆಯುತ್ತಿದೆ. ಇಂತಹ ಲೀಗ್ ಕುರಿತು ಮಹಿಳಾ ಕಾರ್ಯಕಾರಿ ಸಮಿತಿ ಬಿಸಿಸಿಐಗೆ ಮಹಿಳಾ ಆಟಗಾರರ ಕ್ರಿಕೆಟ್ ಬೆಳವಣಿಗೆಗೆ ಮಹಿಳಾ ಟಿ 20 ಲೀಗ್  ನೆರವಾಗುತ್ತದೆಂದು ಶಿಫಾರಸು ಮಾಡಿದರೆ, ನಾವು ಅದನ್ನು ಖಂಡಿತವಾಗಿ ಪರಿಶೀಲಿಸುತ್ತೇವೆ. ಐಪಿಎಲ್ ಮಾದರಿಯಲ್ಲಿ ನಮ್ಮದೇ ಮಹಿಳಾ ಟಿ 20 ಲೀಗ್ ಸ್ಥಾಪಿಸುವ ಕುರಿತು ಚಿಂತನೆ ನಡೆಸಬಹುದು ಎಂದರು. 
 
ಡಬ್ಲ್ಯುಬಿಎಲ್‌ನಲ್ಲಿ ಭಾರತ ಮಹಿಳಾ ಕ್ರಿಕೆಟರುಗಳು ಬೇಡಿಕೆಯ ಆಟಗಾರ್ತಿಯರಾಗಿದ್ದು, ಹರಮ್‌ಪ್ರೀತ್ ಕೌರ್, ಸ್ಮೃತಿ ಮಂದನಾ, ವೇದಾ ಕೃಷ್ಣಮೂರ್ತಿ, ಮಿತಾಲಿ ರಾಜ್ ಮತ್ತು ಜುಲಾನ್ ಗೋಸ್ವಾಮಿ ಈ ಲೀಗ್‌ನಲ್ಲಿ ಆಡಲು ಸಿದ್ಧವಾಗಿದ್ದಾರೆ. ಭಾರತೀಯ ಆಟಗಾರ್ತಿಯರು ಡಬ್ಲ್ಯುಬಿಎಲ್ ಭಾಗವಾಗಿರುವುದು ಅದ್ಭುತ ಬೆಳವಣಿಗೆ. ಭಾರತೀಯರಿಲ್ಲದೇ ಡಬ್ಲ್ಯುಬಿಎಲ್ ಪ್ರಮುಖ ಮಹಿಳಾ ಟಿ 20 ಲೀಗ್ ಎಂದು ಕರೆಯುವುದು ಸಾಧ್ಯವಾಗುವುದಿಲ್ಲ. ಭಾರತ ತಂಡ ಆಸ್ಟ್ರೇಲಿಯಾಕ್ಕೆ ಕಳೆದ ಪ್ರವಾಸದಲ್ಲಿ ವಿಶ್ವ ದರ್ಜೆಯ ಆಟಗಾರ್ತಿಯರನ್ನು ಹೊಂದಿರುವುದನ್ನು ಸಾಬೀತು ಮಾಡಿದ್ದು, ಅವರ ಭಾಗವಹಿಸುವಿಕೆ ಡಬ್ಲ್ಯುಬಿಎಲ್ ತಂಡವನ್ನು ಇನ್ನಷ್ಟು ಶ್ರೇಷ್ಟಗೊಳಿಸುತ್ತದೆ ಎಂದು ಹಾಲಿ ಚಾಂಪಿಯನ್ನರಾದ ಸಿಡ್ನಿ ಥಂಡರ್ಸ್ ಜನರಲ್ ಮ್ಯಾನೇಜರ್ ನಿಕ್ ಕಮ್ಮಿನ್ಸ್ ಹೇಳಿದ್ದಾರೆ.
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಷ್ಟದ ಪರಿಸ್ಥಿತಿಗಳಲ್ಲಿನ ಬ್ಯಾಟಿಂಗ್‌ನಲ್ಲಿ ಕೊಹ್ಲಿ ಸಚಿನ್‌ಗಿಂತ ಶ್ರೇಷ್ಟರು: ಇಮ್ರಾನ್ ಖಾನ್