ವೈರಲ್ ಆಯ್ತು ಅಕ್ಸರ್, ಅಜಾಜ್, ರಚಿನ್, ಜಡೇಜಾ ಬ್ಯಾಕ್ ಪೋಸ್ ಫೋಟೋ

Webdunia
ಮಂಗಳವಾರ, 7 ಡಿಸೆಂಬರ್ 2021 (09:48 IST)
Photo Courtesy: BCCI
ಮುಂಬೈ: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಗೆಲುವಿನ ಬಳಿಕ ಬಿಸಿಸಿಐ ಟೀಂ ಇಂಡಿಯಾ ಮತ್ತು ಕಿವೀಸ್ ನ ನಾಲ್ವರು ಆಟಗಾರರ ಬ್ಯಾಕ್ ಪೋಸ್ ಫೋಟೋವೊಂದನ್ನು ಪ್ರಕಟಿಸಿದೆ. ಈ ಫೋಟೋ ಈಗ ವೈರಲ್ ಆಗಿದೆ.

ಭಾರತೀಯ ಮೂಲದ ನ್ಯೂಜಿಲೆಂಡ್ ಆಟಗಾರರಾದ ರಚಿನ್ ರವೀಂದ್ರ, ಅಜಾಜ್ ಪಟೇಲ್ ಜೊತೆಗೆ ಭಾರತೀಯ ಕ್ರಿಕೆಟಿಗರಾದ ರವೀಂದ್ರ ಜಡೇಜಾ, ಅಕ್ಸರ್ ಪಟೇಲ್ ಹಿಂಭಾಗ ಪೋಸ್ ನೀಡಿದ ಫೋಟೋವನ್ನು ಬಿಸಿಸಿಐ ಪ್ರಕಟಿಸಿ, ‘ಫೋಟೋವೇ ಎಲ್ಲವನ್ನೂ ಹೇಳುತ್ತಿದೆ’ ಎಂದು ಬರೆದುಕೊಂಡಿದೆ. ಅಷ್ಟಕ್ಕೂ ಆ ಫೋಟೋ ವೈರಲ್ ಆಗಲು ಕಾರಣವಿದೆ.

ಅಕ್ಸರ್ ಪಟೇಲ್ ಜರ್ಸೆಯ ಮೇಲೆ ಅಕ್ಸರ್ ಎಂದು ಬರೆಯಲಾಗಿದೆ. ಅಜಾಜ್ ಪಟೇಲ್ ಜೆರ್ಸಿ ಮೇಲೆ ಪಟೇಲ್ ಎಂದು ಬರೆಯಲಾಗಿದೆ. ಹೀಗಾಗಿ ಇಬ್ಬರನ್ನೂ ಅಕ್ಕ-ಪಕ್ಕ ನಿಲ್ಲಿಸಿದಾಗ ಅಕ್ಸರ್ ಪಟೇಲ್ ಎಂಬ ಪೂರ್ಣ ಹೆಸರು ಸಿಗುತ್ತದೆ. ಅದೇ ರೀತಿ ರಚಿನ್ ರವೀಂದ್ರ ಜೆರ್ಸಿ ಮೇಲೆ ರವೀಂದ್ರ ಎಂದು ಬರೆಯಲಾಗಿದ್ದು, ರವೀಂದ್ರ ಜಡೇಜಾ ಜರ್ಸಿ ಮೇಲೆ ಜಡೇಜಾ ಎಂದಿದೆ. ಇಬ್ಬರನ್ನೂ ಅಕ್ಕ-ಪಕ್ಕ ನಿಲ್ಲಿಸಿದಾಗ ರವೀಂದ್ರ ಜಡೇಜಾ ಎಂಬ ಹೆಸರು ಸಿಗುತ್ತದೆ. ಈ ಕ್ರಿಯಾತ್ಮಕತೆಯಿಂದಾಗಿ ಈ ಫೋಟೋ ಈಗ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾಗೆ ಅವಮಾನಕರ ಪದ ಬಳಸಿದ್ರಾ ಜಸ್ಪ್ರೀತ್ ಬುಮ್ರಾ video

ವಿರಾಟ್ ಕೊಹ್ಲಿ ಶತಕದ ಸ್ಟೈಲ್ ಕಾಪಿ ಮಾಡಿದ ಬಾಬರ್ ಅಜಮ್: ಸ್ವಂತಿಕೆನೇ ಇಲ್ವಾ ಎಂದ ನೆಟ್ಟಿಗರು video

IND vs SA: ಟೀಂ ಇಂಡಿಯಾ ವಿರುದ್ಧ ಜುಜುಬಿ ಮೊತ್ತಕ್ಕೆ ಆಲೌಟ್ ಆದ ದಕ್ಷಿಣ ಆಫ್ರಿಕಾ

IND vs SA: ಟಾಸ್ ಗೆದ್ದ ದಕ್ಷಿಣ ಆಫ್ರಿಕಾ, ಬೆಸ್ಟ್ ಟೀಂ ಕಣಕ್ಕಿಳಿಸಿದ ಟೀಂ ಇಂಡಿಯಾ

ಮೊಹಮ್ಮದ್ ಶಮಿ ಯಾಕೆ ಆಯ್ಕೆ ಮಾಡಿಲ್ಲ ಎಂದು ಕೇಳಿದ್ದಕ್ಕೆ ಶುಭಮನ್ ಗಿಲ್ ಉತ್ತರ ಹೀಗಿತ್ತು

ಮುಂದಿನ ಸುದ್ದಿ
Show comments