Select Your Language

Notifications

webdunia
webdunia
webdunia
webdunia

ಡ್ರೀಮ್‌ 11 ಕೈಕೊಟ್ಟ ಬೆನ್ನಲ್ಲೇ ಷರತ್ತಿನೊಂದಿಗೆ ಟೈಟಲ್ ಪ್ರಾಯೋಜಕರಿಗೆ ಬಿಸಿಸಿಐ ಆಹ್ವಾನ

Board of Control for Cricket in India, India Cricket, Dream 11 Gaming App

Sampriya

ನವದೆಹಲಿ , ಮಂಗಳವಾರ, 2 ಸೆಪ್ಟಂಬರ್ 2025 (20:20 IST)
ನವದೆಹಲಿ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯೊಂದಿಗೆ ಡ್ರೀಮ್‌ 11 ಮಾಡಿಕೊಂಡ ಒಪ್ಪಂದ ಮುರಿದ ಬೆನ್ನಲ್ಲೇ ಭಾರತ ಕ್ರಿಕೆಟ್ ತಂಡದ ಟೈಟಲ್‌ ಪ್ರಾಯೋಜಕರಿಗಾಗಿ ಬಿಸಿಸಿಐ ಬಿಡ್‌ ಆಹ್ವಾನಿಸಿದೆ. ಆದರೆ, ಈ ಬಾರಿ ಕೆಲವೊಂದು ಷರತ್ತುಗಳನ್ನು ವಿಧಿಸಿದೆ.

ಈ ಬಾರಿಯ ಬಿಡ್‌ನಲ್ಲಿ ಹಣದ ಜೂಜಾಟಗಳು ಮತ್ತು ಕ್ರಿಪ್ಟೋ ಕರೆನ್ಸಿ ವ್ಯವಹರಿಸುವ ಕಂಪೆನಿಗಳನ್ನು ಬಿಡ್‌ನಲ್ಲಿ ಭಾಗವಹಿಸದಂತೆ  ನಿರ್ಬಂಧಿಸಲಾಗಿದೆ. ಆಸಕ್ತಿ ಅಭಿವೃಕ್ತಿ ಅರ್ಜಿ ನಮೂನೆ ಖರೀದಿಸಲು ಸೆ.12 ಕೊನೆಯ ದಿನವಾಗಿದೆ. ಬಿಡ್ ದಾಖಲೆಗಳನ್ನು ಸೆ. 16ರೊಳಗೆ ಸಲ್ಲಿಸಬೇಕು.  

ಈ ಹಿಂದೆ ಡ್ರೀಮ್‌ 11 ಮತ್ತು ಮೈ ಇಲೆವನ್ ಸರ್ಕಲ್ ಗೇಮಿಂಗ್‌ ಆ್ಯಪ್‌ಗಳ ಪ್ರಾಯೋಜಕತ್ವದಿಂದ ಬಿಸಿಸಿಐಗೆ ಸುಮಾರು ಒಂದು ಕೋಟಿ ರೂಪಾಯಿ ಆದಾಯವಿತ್ತು.  ಪ್ರಸ್ತುತ ಬಿಸಿಸಿಐನೊಂದಿಗೆ ಒಪ್ಪಂದದಲ್ಲಿರುವ ಸಹಪ್ರಾಯೋಜಕ ಸಂಸ್ಥೆಗಳೂ ಈ ಬಿಡ್‌ನಲ್ಲಿ ಭಾಗವಹಿಸುವಂತಿಲ್ಲ ಎಂದೂ ತಿಳಿಸಲಾಗಿದೆ. 

ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆಯನ್ನು ಕೇಂದ್ರ ಸರ್ಕಾರವು ಈಚೆಗೆ  ಜಾರಿಗೊಳಿಸಿದೆ. ಅದರಿಂದಾಗಿ ಈ ಮೊದಲು ಭಾರತ ತಂಡದ ಟೈಟಲ್ ಪ್ರಾಯೋಜಕರಾಗಿದ್ದ ಡ್ರಿಮ್ ಇಲೆವನ್‌ ಜೊತೆಗಿನ ಒಪ್ಪಂದವನ್ನು ಬಿಸಿಸಿಐ ರದ್ದುಗೊಳಿಸಿದೆ. ಆದ್ದರಿಂದ ಈಗ ಹೊಸ ಪ್ರಾಯೋಜಕರನ್ನು ಆಹ್ವಾನಿಸುತ್ತಿದೆ. 

ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆ ಅನ್ವಯ ಜೂಜಾಟ, ಬೆಟ್ಟಿಂಗ್‌ ಪ್ರಚಾರ, ವ್ಯವಹಾರಗಳಲ್ಲಿ ತೊಡಗಿರುವ ಕಂಪೆನಿಗಳಿಗೆ ಬಿಡ್ ಸಲ್ಲಿಸುವಂತಿಲ್ಲ. ಅಷ್ಟೇ ಅಲ್ಲ; ತಂಬಾಕು, ಮದ್ಯ, ಅಶ್ಲೀಲತೆ ಮತ್ತು  ಸಾರ್ವಜನಿಕರ ನೈತಿಕತೆಗೆ ಧಕ್ಕೆ ತರುವ ಯಾವುದೇ ರೀತಿಯ ಸಂಸ್ಥೆಗಳಿಗೂ ನಿರ್ಬಂಧ ಹಾಕಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾದ ವೇಗದ ಮಾಂತ್ರಿಕ ಮಿಚೆಲ್ ಸ್ಟಾರ್ಕ್‌ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ