ಮುಂಬೈ: ಭಾರತದಲ್ಲಿ ನಡೆಯಲಿರುವ ಪುರುಷರ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಟಿಕೆಟ್ ಖರೀದಿಗೆ ದಿನಾಂಕ ನಿಗದಿಯಾಗಿದೆ.
ಅಕ್ಟೋಬರ್ ನಲ್ಲಿ ಭಾರತದ ವಿವಿಧ ತಾಣಗಳಲ್ಲಿ 10 ದೇಶಗಳು ಭಾಗವಹಿಸುವ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯ ಆಯೋಜನೆಯಾಗಲಿದೆ. ಸಹಜವಾಗಿಯೇ ಭಾರತದಲ್ಲಿ ಕ್ರಿಕೆಟ್ ವಿಶ್ವಕಪ್ ಎಂದರೆ ಅಭಿಮಾನಿಗಳೂ ಟಿಕೆಟ್ ಗಾಗಿ ನೂಕು ನುಗ್ಗಲು ನಡೆಸುತ್ತಾರೆ.
ಹೀಗಾಗಿ ಬಿಸಿಸಿಐ ಅಭಿಮಾನಿಗಳಿಗೆ ಆಗಸ್ಟ್ 10 ರಿಂದ ಆನ್ ಲೈನ್ ಟಿಕೆಟ್ ಖರೀದಿಗೆ ಅವಕಾಶ ಮಾಡಿಕೊಡಲಿದೆ. ಆನ್ ಲೈನ್ ನಲ್ಲಿ ಟಿಕೆಟ್ ಬುಕಿಂಗ್ ಮಾಡಿದ ಪ್ರೇಕ್ಷಕರು ಬಳಿಕ ಕ್ರೀಡಾಂಗಣದ ಟಿಕೆಟ್ ಕಲೆಕ್ಷನ್ ಕೇಂದ್ರದಲ್ಲಿ ಟಿಕೆಟ್ ಪಡೆಯಬೇಕು. ಟಿಕೆಟ್ ಇದ್ದರೆ ಮಾತ್ರ ಕ್ರೀಡಾಂಗಣಕ್ಕೆ ಪ್ರವೇಶ ದೊರೆಯಲಿದೆ.