Select Your Language

Notifications

webdunia
webdunia
webdunia
webdunia

ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಬಿಸಿಸಿಐ ಪದಚ್ಯುತರ ಅಸಹಕಾರ ಚಳವಳಿ!

ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಬಿಸಿಸಿಐ ಪದಚ್ಯುತರ ಅಸಹಕಾರ ಚಳವಳಿ!
NewDelhi , ಸೋಮವಾರ, 9 ಜನವರಿ 2017 (10:17 IST)
ನವದೆಹಲಿ: ಬಿಸಿಸಿಐ ಪದಚ್ಯುತರು ಬೆಂಗಳೂರಿನಲ್ಲಿ ಗುಪ್ತವಾಗಿ ಸಭೆ ನಡೆಸಿದ್ದರ ಪರಿಣಾಮಗಳು ಈಗ ಕಾಣಲು ಪ್ರಾರಂಭವಾಗಿದೆ. ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಕೆಲವು ರಾಜ್ಯ ಕ್ರಿಕೆಟ್ ಸಂಸ್ಥೆಗಳು ಅಸಹಕಾರ ಚಳವಳಿಗೆ ಮುಂದಾಗಿವೆ.


ನ್ಯಾಯಾಲಯದ ಆದೇಶವನ್ನು ನೇರವಾಗಿ ಉಲ್ಲಂಘಿಸಲು ಸಾಧ್ಯವಿಲ್ಲದ ಕಾರಣ ಬೇರೆ ಬೇರೆ ನೆಪವೊಡ್ಡಿ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ಸಾಧ್ಯವಿಲ್ಲವೆಂದು ಬಿಸಿಸಿಐಗೆ ತಿಳಿಸಿವೆ. ಇದರಲ್ಲಿ ಪ್ರಮುಖವಾಗಿ ಹೈದರಾಬಾದ್ ಮತ್ತು ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಸೇರಿವೆ.

ಸ್ವಂತ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಈ ರಾಜ್ಯ ಕ್ರಿಕೆಟ್ ಸಂಸ್ಥೆಗಳಲ್ಲಿ ಲೋಧಾ ಸಮಿತಿಯ ವರದಿಯಿಂದಾಗಿ ಹಲವು ಉನ್ನತ ಆಡಳಿತಾಧಿಕಾರಿಗಳು ಅಧಿಕಾರ ಕಳೆದುಕೊಳ್ಳಬೇಕಾಯಿತು. ಈ ಅಸಮಧಾನವನ್ನು ಬಿಸಿಸಿಐ ನಿಗದಿಗೊಳಿಸಿರುವ ಕೆಲವು ಕ್ರಿಕೆಟ್ ಪಂದ್ಯಗಳಿಗೆ ಕ್ರೀಡಾಂಗಣ ನೀಡದೇ ಅಸಹಕರಿಸುವ ಮೂಲಕ ಸೇಡು ತೀರಿಸಿಕೊಳ್ಳಲು ಮುಂದಾಗಿವೆ.

ಇದೆಲ್ಲಾ ಬೆಂಗಳೂರಿನಲ್ಲಿ ನಡೆದಿದ್ದ ಅತೃಪ್ತರ ಸಭೆಯ ಇಫೆಕ್ಟ್ ಎನ್ನಲಾಗುತ್ತಿದೆ. ಪ್ರಮುಖವಾಗಿ ಪದಚ್ಯುತ ಅಧ್ಯಕ್ಷ ಅನುರಾಗ್ ಠಾಕೂರ್ ಮತ್ತು ತಮಿಳುನಾಡು ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಎನ್. ಶ್ರೀನಿವಾಸನ್ ಕುಮ್ಮಕ್ಕು ಇದಕ್ಕಿದೆ ಎನ್ನಲಾಗಿದೆ. ಇದರಿಂದಾಗಿ ಮುಂದಿನ ತಿಂಗಳು ಹೈದರಾಬಾದ್ ಕ್ರಿಕೆಟ್ ಮೈದಾನದಲ್ಲಿ ನಡೆಯಬೇಕಿದ್ದ, ಭಾರತ-ಬಾಂಗ್ಲಾದೇಶ ಟೆಸ್ಟ್ ಪಂದ್ಯಕ್ಕೆ ಮತ್ತು 19 ರ ವಯೋಮಿತಿಯ ಒಳಗಿನವರ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಕ್ಕೆ ಮೈದಾನ ನೀಡದಿರಲು ತಮಿಳುನಾಡು ಕ್ರಿಕೆಟ್ ಸಂಸ್ಥೆ ನಿರ್ಧರಿಸಿದೆ.

ಈ ಮೂಲಕ ಮತ್ತೆ ಪ್ರಕರಣವನ್ನು ನ್ಯಾಯಾಲಯದ ಮೆಟ್ಟಿಲಿಗೆ ತರುವ ಲೆಕ್ಕಾಚಾರ ಪದಚ್ಯುತರದ್ದು. ಈ ಬಗ್ಗೆ ಬಿಸಿಸಿಐಗೆ ಪತ್ರ ಬರೆದಿರುವ ತಮಿಳುನಾಡು ಕ್ರಿಕೆಟ್ ಸಂಸ್ಥೆ ಇದುವರೆಗೆ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು. ಮುಂದಿನ ದಿನಗಳಲ್ಲಿ ನಿಗದಿತ ಸಮಯಕ್ಕೆ ಬೇರೆ ಕಾರ್ಯಕ್ರಮಗಳಿರುವುದರಿಂದ ಟೆಸ್ಟ್ ಪಂದ್ಯಕ್ಕೆ ಸ್ಥಳಾವಕಾಶ ನೀಡಲು ಸಾಧ್ಯವಿಲ್ಲ ಎಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ನಾಯಕರಾಗಿ ಇಂದು ಕೊನೆಯ ಪಂದ್ಯ