Select Your Language

Notifications

webdunia
webdunia
webdunia
webdunia

ಧೋನಿ ನಾಯಕರಾಗಿ ಇಂದು ಕೊನೆಯ ಪಂದ್ಯ

ಧೋನಿ ನಾಯಕರಾಗಿ ಇಂದು ಕೊನೆಯ ಪಂದ್ಯ
Mumbai , ಸೋಮವಾರ, 9 ಜನವರಿ 2017 (09:59 IST)
ಮುಂಬೈ: ಸೀಮಿತ ಓವರ್ ಗಳ ನಾಯಕತ್ವಕ್ಕೆ ರಾಜೀನಾಮೆ ನೀಡಿರುವ ಧೋನಿ ಇಂದು ನಾಯಕರಾಗಿ ಕೊನೆಯ ಪಂದ್ಯವಾಡಲಿದ್ದಾರೆ. ಮುಂಬೈನಲ್ಲಿ ಇಂಗ್ಲೆಂಡ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿಂದು ಅವರು ಭಾರತ ಎ ತಂಡವನ್ನು ಮುನ್ನಡೆಸಲಿದ್ದಾರೆ.

ಈ ಪಂದ್ಯ ಬ್ರೆಬೋರ್ನ್ ಮೈದಾನದಲ್ಲಿ ನಡೆಯಲಿದ್ದು, ನಾಯಕರಾಗಿ ಧೋನಿಯ ಕೊನೆಯ ಪಂದ್ಯವಾಗಿರುವುದರಿಂದ ಅಭ್ಯಾಸ ಪಂದ್ಯಕ್ಕೆ ಭಾರೀ ಮಹತ್ವ ಬಂದಿದೆ. ಈ ಪಂದ್ಯದಲ್ಲಿ ಯುವರಾಜ್ ಸಿಂಗ್ ಸುರೇಶ್ ರೈನಾ ಮತ್ತಿತರು ಆಡುತ್ತಿದ್ದಾರೆ. ಧೋನಿ ಕಳೆದ ಎರಡು ತಿಂಗಳ ನಂತರ ಸ್ಪರ್ಧಾತ್ಮಕ ಕ್ರಿಕೆಟ್ ಮರಳಿದ್ದು, ಈ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್ ಒರೆಗೆ ಹಚ್ಚಿಕೊಳ್ಳಬೇಕಿದೆ.

ಇನ್ನೊಂದೆಡೆ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲನ್ನಪ್ಪಿರುವ ಇಂಗ್ಲೆಂಡ್ ತಂಡಕ್ಕೆ ಏಕದಿನದಲ್ಲೂ ಮಾನ ಉಳಿಸಿಕೊಳ್ಳಬೇಕಾದರೆ ಈ ಅಭ್ಯಾಸ ಪಂದ್ಯದ ಸದುಪಯೋಗ ಪಡಿಸಿಕೊಳ್ಳಲೇಬೇಕು.  ಇನ್ನೊಂದು ಅಭ್ಯಾಸ ಪಂದ್ಯ ಅಜಿಂಕ್ಯಾ ರೆಹಾನೆ ನೇತೃತ್ವದಲ್ಲಿ ಜನವರಿ 12 ರಂದು ನಡೆಯಲಿದೆ. ಏಕದಿನ ತಂಡದಲ್ಲಿ ಆಡುವ ಬಹುತೇಕರು ಅಭ್ಯಾಸ ಪಂದ್ಯದಲ್ಲೂ ಆಡುತ್ತಿದ್ದು, ರಿಯಲ್ ಪಂದ್ಯಕ್ಕೆ ಮೊದಲು ಸಜ್ಜಾಗಲು ಉತ್ತಮ ವೇದಿಕೆ ಸಿಕ್ಕಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಪತ್ರೆಯಲ್ಲಿ ಗೇಲ್ ನರಳಾಟ; ಏನಾಯ್ತು ಕೆರಿಬಿಯನ್ ಕಿಂಗ್‌ಗೆ?