Select Your Language

Notifications

webdunia
webdunia
webdunia
webdunia

ಅಮೆರಿಕದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟಿ 20 ಸರಣಿಗೆ ಬಿಸಿಸಿಐ ಅನುಮೋದನೆ

ಅಮೆರಿಕದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟಿ 20 ಸರಣಿಗೆ  ಬಿಸಿಸಿಐ ಅನುಮೋದನೆ
ನವದೆಹಲಿ , ಮಂಗಳವಾರ, 2 ಆಗಸ್ಟ್ 2016 (19:23 IST)
ಅಮೆರಿಕದ ಫ್ಲೋರಿಡಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎರಡು ಟಿ ಟ್ವೆಂಟಿ ಪಂದ್ಯಗಳಿಗೆ ಬಿಸಿಸಿಐ ಅನುಮೋದನೆ ನೀಡುವ ಮೂಲಕ ಮಹತ್ವದ ಕ್ರಮ ಕೈಗೊಂಡಿದೆ. ಮುಂಬೈನಲ್ಲಿ ನಡೆದ ಮಂಡಳಿಯ ಕಾರ್ಯಕಾರಿ ಸಮಿತಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಎರಡು ಪಂದ್ಯಗಳನ್ನು ಫ್ಲೋರಿಡಾದ ಸೆಂಟ್ರಲ್ ಬ್ರೊವಾರ್ಡ್ ರೀಜನಲ್ ಪಾರ್ಕ್ ಮತ್ತು ಫೋರ್ಟ್ ಲಾಡರ್‌ಡೇಲ್‌ನಲ್ಲಿ ಆಗಸ್ಟ್ 27 ಮತ್ತು 28ರಂದು ಕ್ರಮವಾಗಿ ಆಡಲಾಗುತ್ತದೆ.
 
ಹೊಸ ಮಾರುಕಟ್ಟೆ ಮತ್ತು ಪ್ರೇಕ್ಷಕರನ್ನು ಮುಟ್ಟುವ ನಮ್ಮ ಸತತ ಪ್ರಯತ್ನದ ಭಾಗವಾಗಿ ಟೀಂ ಇಂಡಿಯಾ ಪ್ರಸಕ್ತ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ವಿರುದ್ಧ ಎರಡು ಟಿ 20 ಪಂದ್ಯಗಳನ್ನು ಅಮೆರಿಕದಲ್ಲಿ ಆಡಲಿದೆ ಎಂದು ಅನುರಾಗ್ ಠಾಕೂರ್ ಹೇಳಿಕೆಯಲ್ಲಿ ತಿಳಿಸಿದರು. 
 
ಎರಡು ಚಾಂಪಿಯನ್ ತಂಡಗಳು ಮುಖಾಮುಖಿಯಾಗುವುದನ್ನು ನೋಡುವ ಅವಕಾಶ ಅಮೆರಿಕದ ಕ್ರಿಕೆಟ್ ಅಭಿಮಾನಿಗಳಿಗೆ ಸಿಗಲಿದೆ. ಇದನ್ನು ಅಮೆರಿಕದಲ್ಲಿ ವಾರ್ಷಿಕ ಕ್ರಿಕೆಟ್ ಕೂಟವಾಗಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಹೇಳಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಷ್ಯಾಗೆ ರಿಯೋದಲ್ಲಿ ಅವಕಾಶ ನೀಡಿದ್ದು ನ್ಯಾಯಯುತವಾಗಿದೆ: ಐಒಸಿ ಅಧ್ಯಕ್ಷ