Select Your Language

Notifications

webdunia
webdunia
webdunia
webdunia

ಭಾರತ-ಬಾಂಗ್ಲಾ ಟೆಸ್ಟ್: ಸಂಕಷ್ಟದಲ್ಲಿ ಬಾಂಗ್ಲಾದೇಶ

ಭಾರತ-ಬಾಂಗ್ಲಾ ಟೆಸ್ಟ್: ಸಂಕಷ್ಟದಲ್ಲಿ ಬಾಂಗ್ಲಾದೇಶ
ಢಾಕಾ , ಶನಿವಾರ, 24 ಡಿಸೆಂಬರ್ 2022 (11:14 IST)
WD
ಢಾಕಾ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ 4 ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿರುವ ಬಾಂಗ್ಲಾದೇಶ ತಂಡ ಸಂಕಷ್ಟದಲ್ಲಿದೆ.

ಮೊದಲು ಇನಿಂಗ್ಸ್ ನಲ್ಲಿ 87 ರನ್ ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಬಾಂಗ್ಲಾ ತೃತೀಯ ದಿನವಾದ ಇಂದು ಭೋಜನ ವಿರಾಮದ ವೇಳೆಗೆ 4 ವಿಕೆಟ್ ಕಳೆದುಕೊಂಡಿದೆ. ಇನ್ನೂ 16 ರನ್ ಗಳ ಹಿನ್ನಡೆಯಲ್ಲಿದೆ.

ಬಾಂಗ್ಲಾ ಪರ ನಜ್ಮುಲ್ ಹೊಸೈನ್ 5 ಮೊಮಿನುಲ್ ಹಕ್ 5, ಶಕೀಬ್ ಅಲ್ ಹಸನ್ 13, ಮುಶ್ಫಿಕರ್ ರಹೀಂ 9 ರನ್ ಗೆ ವಿಕೆಡಟ್ ಒಪ್ಪಿಸಿದ್ದಾರೆ. ಇದೀಗ ಝಾಕಿರ್ ಹಸನ್ 37 ರನ್, ಇನ್ನೂ ಖಾತೆ ತೆರೆಯದ ಲಿಟನ್ ದಾಸ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತದ ಪರ ರವಿಚಂದ್ರನ್ ಅಶ್ವಿನ್, ಜಯದೇವ್ ಉನಾದ್ಕಟ್, ಮೊಹಮ್ಮದ್ ಸಿರಾಜ್, ಅಕ್ಸರ್ ಪಟೇಲ್ ತಲಾ 1 ವಿಕೆಟ್ ಕಬಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023 ರ ಟಾಪ್ 10 ದುಬಾರಿ ಆಟಗಾರರು