ಜಿಂಬಾಬ್ವೆ ವಿರುದ್ಧ ಆಡಿ ಕೊಹ್ಲಿ ಲೆವೆಲ್ ಗೆ ಬಾಬರ್ ಅಜಮ್ ಬಿಲ್ಡಪ್

Krishnaveni K
ಮಂಗಳವಾರ, 18 ಜೂನ್ 2024 (11:33 IST)
Photo Credit: X
ಕರಾಚಿ: ಟಿ20 ವಿಶ್ವಕಪ್ ನಲ್ಲಿ ಕಳಪೆ ಪ್ರದರ್ಶನದ ನಂತರ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಈಗ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಪಾಕಿಸ್ತಾನ ಮಾಜಿ ಕ್ರಿಕೆಟಿಗ ದನೇಶ್ ಕನೇರಿಯಾ ಬಾಬರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

 
ಈ ಬಾರಿ ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡ ಲೀಗ್ ಹಂತದಲ್ಲಿಯೇ ಸೋತು ಕೂಟದಿಂದ ನಿರ್ಗಮಿಸಿತ್ತು. ಅದರಲ್ಲೂ ಅಮೆರಿಕಾದಂತಹ ಕ್ರಿಕೆಟ್ ಶಿಶುಗಳ ಕೈಯಲ್ಲೇ ಸೋಲನ್ನು ಅನುಭವಿಸಿತ್ತು. ಈ ಟೂರ್ನಿಯಲ್ಲಿ ನಾಯಕ ಬಾಬರ್ ಅಜಮ್ ಖ್ಯಾತಿಗೆ ತಕ್ಕ ಬ್ಯಾಟಿಂಗ್ ನಡೆಸಲಿಲ್ಲ.

ಹೀಗಾಗಿ ದನೇಶ್ ಕನೇರಿಯಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಆಯ್ಕೆ ಸಮಿತಿ ವಿರುದ್ಧವೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಕೇವಲ ಐರ್ಲೆಂಡ್, ಜಿಂಬಾಬ್ವೆಯಂತಹ ತಂಡದ ವಿರುದ್ಧ ಸ್ಕೋರ್ ಮಾಡುವಂತಹ ಕಳಪೆ ತಂಡವನ್ನು ಆಯ್ಕೆ ಮಾಡುತ್ತೀರಿ ಮತ್ತು ಇಂತಹ ತಂಡದ ವಿರುದ್ಧ ರನ್ ಗಳಿಸುವ ಬಾಬರ್ ಅಜಮ್ ರನ್ನು ವಿರಾಟ್ ಕೊಹ್ಲಿಗೆ ಹೋಲಿಕೆ ಮಾಡಿ ಬಿಲ್ಡಪ್ ಕೊಡುತ್ತೀರಿ’ ಎಂದು ಕನೇರಿಯಾ ಟೀಕಿಸಿದ್ದಾರೆ.

‘ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ರಾಜಕೀಯವೇ ತಾಂಡವವಾಡುತ್ತಿದೆ. ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಗ್ಯಾರಿ ಕಸ್ಟರ್ನ್ ರನ್ನು ಕೋಚ್ ಆಗಿ ನೇಮಿಸಿದ್ದೀರಿ. ಆದರೆ ಅವರು ಒಬ್ಬರಿಂದ ಮ್ಯಾಜಿಕ್ ಮಾಡಲಾಗದು. ಎಷ್ಟು ದಿನ ಬಾಬರ್-ರಿಜ್ವಾನ್ ಎಂದು ಈ ಎರಡೇ ಹೆಸರನ್ನು ಕೇಳುತ್ತೀರಿ’ ಎಂದು ಆಯ್ಕೆ ಸಮಿತಿಯ ವಿರುದ್ಧ ದನೇಶ್ ಕನೇರಿಯಾ ವಾಗ್ದಾಳಿ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅನುಷ್ಕಾ ಶರ್ಮಾ ಲಂಡನ್‌ ಮೋಹದಿಂದ ವಿರಾಟ್‌ ಕೊಹ್ಲಿಯ ಕ್ರಿಕೆಟ್‌ ಹಾಳಾಯಿತಾ: ನೆಟ್ಟಿಗರ ತರಾಟೆ

ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಅವರಿಗೆ ಭಾರತೀಯ ಸೇನೆಯಲ್ಲಿ ವಿಶೇಷ ಹುದ್ದೆ

ಟೀಂ ಇಂಡಿಯಾ ಉದ್ದಾರವಾಗಬೇಕೆಂದರೆ ಈ ಇಬ್ಬರನ್ನು ಮೊದಲು ಕಿತ್ತು ಹಾಕ್ಬೇಕು

ಎರಡು ಬಾರಿ ಸೊನ್ನೆ ಸುತ್ತಿದ ವಿರಾಟ್ ಕೊಹ್ಲಿ ಮಾಡಿದ್ದೇನು

INDW vs NZW: ಅಂತೂ ಇಂತೂ ವಿಶ್ವಕಪ್ ಸೆಮಿಫೈನಲ್ ಗೆ ಲಗ್ಗೆಯಿಟ್ಟ ಭಾರತ ವನಿತೆಯರು

ಮುಂದಿನ ಸುದ್ದಿ
Show comments