Daily Horoscope

Select Your Language

Notifications

webdunia
webdunia
webdunia
webdunia

ಏಷ್ಯಾ ಕಪ್ ಮೊದಲ ಪಂದ್ಯದಲ್ಲಿಯೇ ವಿರಾಟ್ ಕೊಹ್ಲಿ ದಾಖಲೆ ಸನಿಹ ಬಂದ ಬಾಬರ್ ಅಜಮ್

ಬಾಬರ್ ಅಜಮ್
ಮುಲ್ತಾನ್: ಏಷ್ಯಾ ಕಪ್ ಕ್ರಿಕೆಟ್ 2023 ರ ಮೊದಲ ಪಂದ್ಯದಲ್ಲಿ ನೇಪಾಳವನ್ನು 238 ರನ್ ಗಳ ಭರ್ಜರಿ ಅಂತರದಿಂದ ಗೆದ್ದ ಪಾಕಿಸ್ತಾನ ಶುಭಾರಂಭ ಮಾಡಿದೆ.

ಈ ಪಂದ್ಯದಲ್ಲಿ ಪಾಕ್ ನಾಯಕ ಬಾಬರ್ ಅಜಮ್ 131 ಎಸೆತಗಳಿಂದ 151 ರನ್ ಚಚ್ಚಿದ್ದರು. ಅವರ ಈ ಇನಿಂಗ್ಸ್ ನಿಂದ ದಾಖಲೆಗಳು ನೆಲಸಮವಾಗಿದೆ. ಏಷ್ಯಾ ಕಪ್ ನಲ್ಲಿ ವಿರಾಟ್ ಕೊಹ್ಲಿ ಬಳಿಕ ಗರಿಷ್ಠ ರನ್ ಗಳಿಸಿದ ದಾಖಲೆ ಮಾಡಿದ್ದಾರೆ. ಕೊಹ್ಲಿ 183 ರನ್ ಗಳ ಇನಿಂಗ್ಸ್ ಇದುವರೆಗಿನ ದಾಖಲೆಯಾಗಿದೆ. ಇದೀಗ ಬಾಬರ್ ಎರಡನೇ ಗರಿಷ್ಠ ಸ್ಕೋರರ್ ಆಗಿದ್ದಾರೆ.

ಮೊದಲ ಪಂದ್ಯದಲ್ಲೇ ಭರ್ಜರಿ ಫಾರ್ಮ್ ಪ್ರದರ್ಶಿಸಿರುವ ಪಾಕ್ ನಾಯಕ ಈಗ ಟೀಂ ಇಂಡಿಯಾ ಪಾಳಯದಲ್ಲಿ ಆತಂಕ ತಂದಿತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಪಾಕಿಸ್ತಾನಕ್ಕೆ ಮಳೆ ಭೀತಿ? ಹೇಗಿದೆ ಹವಾಮಾನ ಮುನ್ಸೂಚನೆ?