Select Your Language

Notifications

webdunia
webdunia
webdunia
webdunia

ಆಸಿಸ್ ಶ್ರೀಲಂಕಾ ಪ್ರವಾಸಕ್ಕೆ ಹೆನ್ರಿಕ್ಸ್, ಮಿಚೆಲ್ ಸ್ಟಾರ್ಕ್‌ ಮರುಆಯ್ಕೆ

ಆಸಿಸ್ ಶ್ರೀಲಂಕಾ ಪ್ರವಾಸಕ್ಕೆ ಹೆನ್ರಿಕ್ಸ್, ಮಿಚೆಲ್ ಸ್ಟಾರ್ಕ್‌  ಮರುಆಯ್ಕೆ
ಮೆಲ್ಬರ್ನ್: , ಮಂಗಳವಾರ, 24 ಮೇ 2016 (20:04 IST)
ಆಸ್ಟ್ರೇಲಿಯಾ ಆಲ್‌ರೌಂಡರ್ ಮಾಯಿಸಸ್ ಹೆನ್ರಿಕ್ಸ್ ಅವರು ಜುಲೈ ,ಆಗಸ್ಟ್‌ನಲ್ಲಿ ನಡೆಯುವ ಶ್ರೀಲಂಕಾದ ಮೂರು ಪಂದ್ಯಗಳ ಪ್ರವಾಸಕ್ಕಾಗಿ  ಟೆಸ್ಟ್ ತಂಡದಲ್ಲಿ ಮೂರು ವರ್ಷಗಳ ನಂತರ ಆಯ್ಕೆಯಾಗಿದ್ದಾರೆ. 2013ರ ದುರಾದೃಷ್ಟದ ಭಾರತ ಪ್ರವಾಸದಲ್ಲಿ ತಮ್ಮ ಕೊನೆಯ 3 ಟೆಸ್ಟ್‌ಗಳನ್ನು ಹೆನ್ರಿಕ್ಸ್ ಆಡಿದ್ದರು.
 
 ಹೆನ್ರಿಕ್ಸ್ ಆ ಸರಣಿಯಲ್ಲಿ ಯಾವುದೇ ಪರಿಣಾಮ ಬೀರಿರದಿದ್ದರೂ ಪೀಟರ್ ಸಿಡ್ಡಲ್ ಮತ್ತು ಪ್ಯಾಟಿಸನ್ ಗಾಯಗೊಂಡಿದ್ದರಿಂದ ಅವರಿಗೆ ಅವಕಾಶ ಸಿಕ್ಕಿತ್ತು. ವೇಗದ ಬೌಲರ್ ಮಿಚಲ್ ಸ್ಟಾರ್ಕ್ ಪಾದಗಳ ಗಾಯದಿಂದ ಚೇತರಿಸಿಕೊಂಡಿದ್ದು, ಸ್ಪಿನ್ನರ್ ಸ್ಟೀಫನ್ ಒ ಕೀಫ್ ಅವರನ್ನು ಕೂಡ 15 ಮಂದಿ ತಂಡದಲ್ಲಿ ಹೆಸರಿಸಲಾಗಿದೆ.
 
 ತಂಡದ ಆಟಗಾರರು: 
ತಂಡ: ಸ್ಟೀವ್ ಸ್ಮಿತ್ (ನಾಯಕ), ಡೇವಿಡ್ ವಾರ್ನರ್, ಜೋ ಬರ್ನ್ಸ್, ಉಸ್ಮಾನ್ ಖ್ವಾಜಾ, ಆಡಮ್ ವೋಗ್ಸ್, ಶಾನ್ ಮಾರ್ಷ್, ಮಿಶೆಲ್ ಮಾರ್ಷ್, ಮೊಯ್ಸಿಸ್ ಹೆನ್ರಿಕ್ಸ್, ಪೀಟರ್ ನೆವಿಲ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್, ನಥಾನ್ ಲಿನ್, ಸ್ಟೀಫನ್ ಓ ಕೀಫ್, ಜಾಕ್ಸನ್ ಬರ್ಡ್, ನಾಥನ್ ಕೌಲ್ಟರ್ ನೈಲ್.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶ್ ಗೌರವ್ ಸೇಖ್ರಿಯ "ನಾಟ್ ಔಟ್''- ಐಪಿಎಲ್ ಸಮತೋಲಿತ ವಿವರ