Daily Horoscope
✕

Asia Cup Cricket: ದುರ್ಬಲ ತಂಡದ ವಿರುದ್ಧವೂ ತಿಣುಕಾಡಿ ಗೆದ್ದ ಟೀಂ ಇಂಡಿಯಾ

Krishnaveni K
ಶನಿವಾರ, 20 ಸೆಪ್ಟಂಬರ್ 2025 (08:54 IST)
ಅಬುದಾಬಿ: ಭಾರತ ಮತ್ತು ಒಮನ್ ನಡುವಿನ ಏಷ್ಯಾ ಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ದುರ್ಬಲ ತಂಡದ ಎದುರು ತಿಣುಕಾಡಿ 21 ರನ್ ಗಳ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ಸಂಜು ಸ್ಯಾಮ್ಸನ್ 56, ಅಭಿಷೇಕ್ ಶರ್ಮಾ 38, ತಿಲಕ್ ವರ್ಮಾ 29, ಅಕ್ಸರ್ ಪಟೇಲ್ 26 ರನ್ ಗಳಿಸಿದರು. ಒಮನ್ ದುರ್ಬಲ ತಂಡದ ವಿರುದ್ಧವೂ ಟೀಂ ಇಂಡಿಯಾ ನಿರೀಕ್ಷಿತ ರನ್ ಗಳಿಸುವಲ್ಲಿ ವಿಫಲವಾಯಿತು. ನಾಯಕ ಸೂರ್ಯಕುಮಾರ್ ಯಾದವ್ ಬ್ಯಾಟ್ ಮಾಡಲಿಲ್ಲ.

ಇದಕ್ಕೆ ಉತ್ತರವಾಗಿ ಒಮನ್ ಭರ್ಜರಿ ಬ್ಯಾಟಿಂಗ್ ನಡೆಸಿತು. ಭಾರತದ ಪರ ನಿನ್ನೆ 8 ಮಂದಿ ಬೌಲಿಂಗ್ ಮಾಡಿದ್ದರು! ಈ ಪೈಕಿ ಹಾರ್ದಿಕ್ ಪಾಂಡ್ಯ, ಅರ್ಷ್ ದೀಪ್ ಸಿಂಗ್, ಹರ್ಷಿತ್ ರಾಣಾ, ಕುಲದೀಪ್ ಯಾದವ್ ತಲಾ 1 ವಿಕೆಟ್ ಕಬಳಿಸಿದರು. ಒಮನ್ ಪರ ಅಮೀರ್ ಖಲೀಂ ಹೋರಾಟದ 64 ರನ್ ಗಳಿಸಿ ಗಮನ ಸೆಳೆದರು. ಅವರಿಗೆ ಸಾಥ್ ನೀಡಿದ ಹಮದ್ ಮಿರ್ಜಾ 51 ರನ್ ಗಳಿಸಿ ಮಿಂಚಿದರು. ಅಂತಿಮವಾಗಿ ಒಮನ್ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಭಾರತ ಸತತ ಮೂರನೇ ಗೆಲುವು ಸಾಧಿಸಿದಂತಾಯಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

ಮೊಹಮ್ಮದ್ ಸಿರಾಜ್ ಗಿಂತ ಪ್ರಸಿದ್ಧ ಕೃಷ್ಣ ಗ್ರೇಟಾ.. ಸಿರಾಜ್ ರನ್ನು ಯಾಕೆ ಕೈ ಬಿಟ್ರಿ: ಫ್ಯಾನ್ಸ್ ಫುಲ್ ಗರಂ

IND vs NZ test: ಔಟ್ ಯಾಕಿಲ್ಲ… ಮೈದಾನದಲ್ಲೇ ಅಂಪಾಯರ್ ಜೊತೆ ರೊಚ್ಚಿಗೆದ್ದ ಕ್ಯಾಪ್ಟನ್ ಶುಭಮನ್ ಗಿಲ್ Video

ನಿವೃತ್ತಿ ಬಗ್ಗೆ ಸಿಎಸ್ ಕೆಗೆ ಧೋನಿ ಹೇಗೆ ಹೇಳಿದ್ರು, ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ

ಐಪಿಎಲ್ 2027 ರಿಟೆನ್ಷನ್ ಡೆಡ್‌ಲೈನ್: ಹಾಲಿ ಚಾಂಪಿಯನ್ ಆರ್‌ಸಿಬಿ ತಂಡದಿಂದ ಹೊರಬೀಳಲಿರುವ ನಾಲ್ವರು ಪ್ರಮುಖ ಆಟಗಾರರು ಇವರೇ ನೋಡಿ

IND vs NZ ಟೆಸ್ಟ್ ಸರಣಿ 2026: ವೇಳಾಪಟ್ಟಿ, ಭಾರತ ತಂಡ, ಸಮಯ ಮತ್ತು ನೇರಪ್ರಸಾರದ ಸಂಪೂರ್ಣ ವಿವರ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments