Publish Date: Tue, 02 Jun 2026 (11:11 IST)
Updated Date: Tue, 02 Jun 2026 (11:15 IST)
ಮುಂಬೈ: ಭುವನೇಶ್ವರ್ ಕುಮಾರ್ ಅವರನ್ನು ಆರ್ ಸಿಬಿ ತಂಡ ಎರಡು ವರ್ಷದ ಹಿಂದೆ ಹರಾಜಿನಲ್ಲಿ ಖರೀದಿಸಿದಾಗ ಗುಜರಾತ್ ಟೈಟನ್ಸ್ ಕೋಚ್ ಆಶಿಶ್ ನೆಹ್ರಾ ನಕ್ಕಿದ್ದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಎರಡು ವರ್ಷದ ಹಿಂದೆ ಮೆಗಾ ಹರಾಜಿನಲ್ಲಿ ಭುವನೇಶ್ವರ್ ಕುಮಾರ್ ಅವರನ್ನು ಆರ್ ಸಿಬಿ 10.75 ಕೋಟಿ ರೂ.ಗೆ ಖರೀದಿ ಮಾಡಿತ್ತು. ಅವರ ಮೂಲ ಬೆಲೆ ಅಂದು 2 ಕೋಟಿ ರೂ.ಗಳಾಗಿತ್ತು. ಹೈದರಾಬಾದ್ ತಂಡದಲ್ಲಿದ್ದ ಭುವಿಯನ್ನು ಆರ್ ಸಿಬಿ ಖರೀದಿ ಮಾಡಿದಾಗ ಯಾಕೆ ಮಾಡಿದ್ರೋ ಎಂದು ಎಲ್ಲರೂ ಅಂದುಕೊಂಡಿದ್ದರು.
ವಿಶೇಷವೆಂದರೆ ಅಂದು ಹರಾಜು ಟೇಬಲ್ ನಲ್ಲಿ ಗುಜರಾತ್ ಮಾಲಿಕರೊಂದಿಗೆ ಕೂತಿದ್ದ ಆಶಿಶ್ ನೆಹ್ರಾ ಅಯ್ಯೋ.. ಹೋಗಿ ಹೋಗಿ ಇವನಿಗೆ ಇಷ್ಟೊಂದು ಬೆಲೆ ಕೊಟ್ಟು ಖರೀದಿ ಮಾಡಿದ್ರಾ ಎನ್ನುವಂತೆ ಹಣೆ ಚಚ್ಚಿಕೊಂಡ ವಿಡಿಯೋವೊಂದು ಈಗ ವೈರಲ್ ಆಗಿದೆ.
ಅಂದು ಭುವಿಯನ್ನು ನೋಡಿ ಗುಜರಾತ್ ತಂಡದ ಕೋಚ್, ಮಾಲಿಕರು ಲೇವಡಿ ಮಾಡಿದ್ದರು. ಇಂದು ಅದೇ ಭುವಿ ಗುಜರಾತ್ ತಂಡವನ್ನು ಫೈನಲ್ ನಲ್ಲಿ ಆರ್ ಸಿಬಿ ಸೋಲಿಸಲು ಪ್ರಮುಖ ಪಾತ್ರ ವಹಿಸಿದ್ದಾರೆ. ಇದಲ್ಲವೇ ಕರ್ಮ ಎಂದರೆ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ