Webdunia - Bharat's app for daily news and videos

Install App

ವಿರಾಟ್ ಕೊಹ್ಲಿಯನ್ನೇ ಸ್ಲೆಡ್ಜ್ ಮಾಡಿದ ಅನುಷ್ಕಾ!

Webdunia
ಶನಿವಾರ, 27 ಮೇ 2023 (09:20 IST)
Photo Courtesy: Twitter
ಮುಂಬೈ: ಕಿಂಗ್ ಕೊಹ್ಲಿ ಮೈದಾನದಲ್ಲಿ ಎದುರಾಳಿಗಳನ್ನು ಸ್ಲೆಡ್ಜ್ ಮಾಡುವುದರಲ್ಲಿ ಫೇಮಸ್. ಅವರನ್ನು ಕೆಣಕಲು ಬಂದವರನ್ನೂ ಸುಮ್ಮನೇ ಬಿಡುವವರಲ್ಲ. ಆದರೆ ಈಗ ಕೊಹ್ಲಿಯನ್ನೇ ಅನುಷ್ಕಾ ಸ್ಲೆಡ್ಜ್ ಮಾಡಿದ್ದಾರೆ.

ಪ್ಯೂಮಾ ಇಂಡಿಯಾದ ಸಂದರ್ಶನವೊಂದರಲ್ಲಿ ಅನುಷ್ಕಾ, ವಿರಾಟ್ ಭಾಗಿಯಾಗಿದ್ದರು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಬ್ಬರಿಗೂ ಹಲವು ಸ್ವಾರಸ್ಯಕರ ಪ್ರಶ್ನೆ, ಟಾಸ್ಕ್ ನೀಡಲಾಯಿತು. ಅದರಂತೆ ನಿರೂಪಕರು ವಿರಾಟ್ ಬ್ಯಾಟಿಂಗ್ ಮಾಡುತ್ತಾರೆ, ನೀವು ಸ್ಲೆಡ್ಜಿಂಗ್ ಮಾಡಬೇಕು ಎಂದು ಟಾಸ್ಕ್ ಕೊಟ್ಟರು.

ಅದರಂತೆ ಅನುಷ್ಕಾ ವಿರಾಟ್ ಹಿಂದೆ ಕೀಪರ್ ಆಗಿ ನಿಂತು ‘ಈವತ್ತು ಏಪ್ರಿಲ್ 24 ಕನಿಷ್ಠ ಪಕ್ಷ ಈವತ್ತಾದ್ರೂ ರನ್ ಗಳಿಸಿ ಎಂದು ಕಾಲೆಳೆಯುತ್ತಾರೆ. ಅನುಷ್ಕಾ ಸ್ಲೆಡ್ಜ್ ಗೆ ಸ್ವತಃ ವಿರಾಟ್ ಬೌಲ್ಡ್ ಆಗುತ್ತಾರೆ. ಬಳಿಕ ಅನುಷ್ಕಾ ವಿಕೆಟ್  ಬಿದ್ದಾಗ ವಿರಾಟ್ ಸಂಭ್ರಮಿಸುವುದನ್ನು ಅನುಕರಿಸಿ ನೆರೆದಿದ್ದವರನ್ನು ನಗೆಗಡಲಲ್ಲಿ ತೇಲಿಸುತ್ತಾರೆ. ಈ ಸಂದರ್ಶನದಲ್ಲಿ ಅನುಷ್ಕಾ-ವಿರಾಟ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅನೇಕ ಮಾಹಿತಿ ಹೊರಹಾಕಿದ್ದಾರೆ. ನಿಮ್ಮ ಫೋನ್ ನಲ್ಲಿ ವಿರಾಟ್ ನಂಬರ್ ಏನೆಂದು ಸೇವ್ ಮಾಡಿದ್ದೀರಿ ಎಂದು ಪ್ರಶ್ನಿಸಿದಾಗ ಪತಿ ಪರಮೇಶ್ವರ್ ಎಂದು ನಾಚಿಕೊಳ್ಳುತ್ತಾರೆ ಅನುಷ್ಕಾ. ಈ ವಿಡಿಯೋಗಳು ಈಗ ವೈರಲ್ ಆಗಿವೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಲಂಡನ್‌ನಿಂದ ತುರ್ತಾಗಿ ವಾಪಸಾದ ಗೌತಮ್‌ ಗಂಭೀರ್‌: ವಿವಿಎಸ್​ ಲಕ್ಷ್ಮಣ್‌ಗೆ ಹೊಸ ಜವಾಬ್ದಾರಿ ನೀಡಲು ಚಿಂತನೆ

ಎಬಿಡಿ ವಿಲಿಯರ್ಸ್ ಗೆ ಒಂದೇ ತಿಂಗಳಲ್ಲಿ ಡಬಲ್ ಧಮಾಕ

ICC World Test Championship 2025: ಕೊನೆಗೂ ಚಾಂಪಿಯನ್ ಪಟ್ಟ ಅಲಂಕರಿಸಿದ ದಕ್ಷಿಣ ಆಫ್ರಿಕಾ

ಮುಂಬೈ ಇಂಡಿಯನ್ಸ್ ತಂಡದಿಂದ ಹೊರ ಇಡುತ್ತಿದ್ದ ಹಾಗೇ ಸಹೋದರಿ ಜತೆ ಫಾರಿನ್‌ಗೆ ಹೋದ ಅರ್ಜುನ್ ತೆಂಡೂಲ್ಕರ್‌

WTC Final: ಚೋಕರ್ಸ್‌ ಹಣೆಪಟ್ಟಿ ಕಳಚುವತ್ತ ದಕ್ಷಿಣ ಆಫ್ರಿಕಾ: ಹಿಡಿತ ಸಾಧಿಸಿದ ಹರಿಣ ಪಡೆ

ಮುಂದಿನ ಸುದ್ದಿ
Show comments