Select Your Language

Notifications

webdunia
webdunia
webdunia
webdunia

ಮಕ್ಕಳನ್ನು ಯಾಕೆ ಕ್ಯಾಮರಾದಿಂದ ದೂರವಿಡುತ್ತಿದ್ದಾರೆ ಎಂಬುದಕ್ಕೆ ಉತ್ತರ ಕೊಟ್ಟ ಅನುಷ್ಕಾ ಶರ್ಮಾ

Virat Kohli-Anushka Sharma

Krishnaveni K

ಮುಂಬೈ , ಸೋಮವಾರ, 23 ಜೂನ್ 2025 (16:53 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇದುವರೆಗೆ ತಮ್ಮ ಇಬ್ಬರೂ ಮಕ್ಕಳ ಫೋಟೋ, ವಿಡಿಯೋ ಬಹಿರಂಗಗೊಳಿಸಿಲ್ಲ. ಅಷ್ಟಕ್ಕೂ ಮಕ್ಕಳನ್ನು ಯಾಕೆ ಕ್ಯಾಮರಾಗಳಿಂದ ದೂರವಿಡುತ್ತಿದ್ದಾರೆ ಎಂಬುದಕ್ಕೆ ಸ್ವತಃ ಅನುಷ್ಕಾ ಉತ್ತರಿಸಿದ್ದಾರೆ.

ಸಂದರ್ಶನವೊಂದರಲ್ಲಿ ಅನುಷ್ಕಾ ತಮ್ಮ ತಾಯ್ತನ, ಮಕ್ಕಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಈ ವೇಳೆ 4 ವರ್ಷದ ಮಗಳು ವಮಿಕಾ ಮತ್ತು ಒಂದೂವರೆ ವರ್ಷದ ಮಗ ಅಕಾಯ್ ನನ್ನು ಕ್ಯಾಮರಾದಿಂದ ದೂರವಿಡುತ್ತಿರುವುದು ಯಾಕೆ ಎಂದು ವಿವರಿಸಿದ್ದಾರೆ.

ನಾವು ಒಂದು ಉತ್ತಮ ಕೌಟುಂಬಿಕ ಹಿನ್ನಲೆಯಿಂದ ಬಂದವರು. ನಮ್ಮ ಮಕ್ಕಳೂ ಎಲ್ಲರನ್ನೂ ಗೌರವಿಸುವುದನ್ನು ಕಲಿಯಬೇಕು ಎಂಬುದು ನಮ್ಮ ಆಸೆ. ಈಗಲೇ ಅವರಿಗೆ ಮಾಧ್ಯಮಗಳ ಗಮನ ನೀಡಿ ಅವರ ಮುಗ್ಧತೆ ಹಾಳು ಮಾಡಲು ಇಷ್ಟವಿಲ್ಲ. ಅದಕ್ಕೇ ಅವರನ್ನು ಕ್ಯಾಮರಾದಿಂದ ದೂರವಿಡುತ್ತಿದ್ದೇವೆ ಎಂದಿದ್ದಾರೆ.

ಇನ್ನು ಮಕ್ಕಳನ್ನು ನೋಡಿಕೊಳ್ಳುವ ವಿಚಾರದಲ್ಲೂ ಕೊಹ್ಲಿ ಹಾಗೂ ತಮ್ಮ ಮಧ್ಯೆ ಸಮಭಾಗವೇನೂ ಆಗಿಲ್ಲ. ನಾವಿಬ್ಬರೂ ಒಟ್ಟಾಗಿ ಒಂದು ಕುಟುಂಬವಾಗಿ ನಮ್ಮ ಮಕ್ಕಳನ್ನು ನೋಡಿಕೊಳ್ಳುತ್ತಿದ್ದೇವೆ ಎಂದು ಅನುಷ್ಕಾ ಹೇಳಿದ್ದಾರೆ. ಇದುವರೆಗೆ ಕೊಹ್ಲಿ ದಂಪತಿ ತಮ್ಮ ಮಕ್ಕಳ ಫೋಟೋಗಳನ್ನು ಹಂಚಿಕೊಂಡಿಲ್ಲ. ಮಾಧ್ಯಮಗಳಿಗೂ ಫೋಟೋ, ವಿಡಿಯೋ ತೆಗೆಯದಂತೆ ಕಟ್ಟುನಿಟ್ಟು ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

5 ವಿಕೆಟ್ ಪಡೆದ ಚೆಂಡನ್ನು ಅರ್ಹ ವ್ಯಕ್ತಿಗೇ ಗಿಫ್ಟ್ ಕೊಟ್ಟ ಜಸ್ಪ್ರೀತ್ ಬುಮ್ರಾ