ಗಿಲ್ ಗೆ ಸಿಕ್ಕಷ್ಟು ಅವಕಾಶ ಪೂಜಾರಗೂ ಸಿಕ್ಕಿಲ್ಲ: ಅನಿಲ್ ಕುಂಬ್ಳೆ

Krishnaveni K
ಸೋಮವಾರ, 29 ಜನವರಿ 2024 (14:31 IST)
ಮುಂಬೈ: ಇಂಗ್ಲೆಂಡ್  ವಿರುದ್ಧ ಬ್ಯಾಟಿಂಗ್ ವೈಫಲ್ಯದಿಂದ ಸೋತ ಟೀಂ ಇಂಡಿಯಾ ಬಗ್ಗೆ ಮಾಜಿ ಕ್ರಿಕೆಟಿಗ, ಕೋಚ್ ಅನಿಲ್ ಕುಂಬ್ಳೆ ವಿಮರ್ಶೆ ಮಾಡಿದ್ದಾರೆ.

ವಿಶೇಷವಾಗಿ ಶುಬ್ಮನ್ ಗಿಲ್ ಬ್ಯಾಟಿಂಗ್ ಬಗ್ಗೆ ಅನಿಲ್ ಕುಂಬ್ಳೆ ಕಾಮೆಂಟ್ ಮಾಡಿದ್ದಾರೆ. ಬಹುಶಃ ಗಿಲ್ ಗೆ ಸಿಕ್ಕಷ್ಟು ಅವಕಾಶ ಚೇತೇಶ್ವರ ಪೂಜಾರಗೂ ಸಿಕಿಲ್ಲ. ಹಾಗಿದ್ದರೂ ಅವರು ಪ್ರೂವ್ ಮಾಡಿಲ್ಲ ಎಂದು ಅನಿಲ್ ಕುಂಬ್ಳೆ ಟೀಕಿಸಿದ್ದಾರೆ.

‘ಗಿಲ್ ರನ್ ಗಳಿಸಲೇಬೇಕಿದೆ. ಇದಕ್ಕಾಗಿ ಅವರು ಕಠಿಣ ಪರಿಶ್ರಮ ಪಡಬೇಕು. ಸ್ಪಿನ್ ಬೌಲಿಂಗ್ ಎದುರಿಸಲು ಅವರು ತಮ್ಮದೇ ತಂತ್ರಗಾರಿಕೆ ಮಾಡಬೇಕು. ಅವರು ತಮ್ಮ ಹುಳುಕುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಪಂದ್ಯ ಆರಂಭಕ್ಕೆ ನಾಲ್ಕು ದಿನಗಳ ಮೊದಲು ತಯಾರಿ ನಡೆಸಲು ಸಾಧ‍್ಯವಿಲ್ಲ. ಅದಕ್ಕೆ ಸಮಯ ಬೇಕಾಗುತ್ತದೆ. ನಿಮ್ಮ ಬಳಿ ಅತ್ಯುತ್ತಮ ಕೋಚ್ (ದ್ರಾವಿಡ್) ಇರುವಾಗ ಖಂಡಿತಾ ಅದನ್ನು ಸಾಧಿಸಬಹುದು’ ಎಂದಿದ್ದಾರೆ.

ಇನ್ನು, ಪೂಜಾರ ಸ್ಥಾನವನ್ನು ಗಿಲ್ ಆವರಿಸಿಕೊಂಡಿರುವುದರ ಬಗ್ಗೆ ಮಾತನಾಡಿರುವ ಕುಂಬ್ಳೆ, ‘ಗಿಲ್ ಸ್ವಯಂ ಪ್ರೇರಿತರಾಗಿ ಪೂಜಾರ ಅವರ ಮೂರನೇ ಕ್ರಮಾಂಕದಲ್ಲಿ ಆಡಲು ಬಯಸಿದ್ದರು. ಹೀಗಿರುವಾಗ ಆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ತಕ್ಕ ಯೋಜನೆ ರೂಪಿಸಬೇಕು. ಬಹುಶಃ ಗಿಲ್ ಗೆ ಸಿಕ್ಕಷ್ಟು ಅವಕಾಶ ಪೂಜಾರಗೂ ಸಿಕ್ಕಿಲ್ಲ. ಗಿಲ್ ಇನ್ನೂ ಯಂಗ್. ಅಷ್ಟೇ ಪ್ರತಿಭಾವಂತರು. ಅವರು ಕಲಿಯಲು ಸಾಕಷ್ಟಿದೆ’ ಎಂದಿದ್ದಾರೆ ಕುಂಬ್ಳೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕಾಲು ಮುರಿದಿದ್ರೂ ಆಡಿದ್ದ ರಿಷಭ್ ಪಂತ್ ನೋಡಿ ಕಲಿಯಿರಿ: ಪಿಚ್ ನೋಡಿ ಡವ್ ಮಾಡಿದ್ರಾ ಶುಭಮನ್ ಗಿಲ್

ಟೀಂ ಇಂಡಿಯಾ ಸೋಲಿನ ಬಳಿಕ ಕೋಲ್ಕತ್ತಾ ಪಿಚ್ ಬಗ್ಗೆ ಗಂಗೂಲಿ ಹೇಳಿಕೆ ವೈರಲ್

ರಾಹುಲ್ ದ್ರಾವಿಡ್, ರೋಹಿತ್ ಕಟ್ಟಿದ ತಂಡವನ್ನು ಕೆಡವಿದ ಗೌತಮ್ ಗಂಭೀರ್: ನೆಟ್ಟಿಗರ ಛೀಮಾರಿ

IND vs SA 1st Test: ಭಾರತದ ಗೆಲುವಿಗೆ 124 ರನ್‌ಗಳ ಗುರಿ ನೀಡಿದ ದಕ್ಷಿಣ ಆಫ್ರಿಕಾ ತಂಡ

ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದ ವೇಳೆ ಶುಭಮನ್‌ ಗಿಲ್‌ಗೆ ಗಾಯ: ಭಾರತ ತಂಡಕ್ಕೆ ಬಿಗ್‌ಶಾಕ್‌

ಮುಂದಿನ ಸುದ್ದಿ
Show comments