Publish Date: Sun, 24 Jun 2018 (08:30 IST)
Updated Date: Sun, 24 Jun 2018 (08:32 IST)
ಬೆಂಗಳೂರು: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜತೆಗೆ ವೈಮನಸ್ಯದ ಕಾರಣ ಒಂದು ವರ್ಷದ ಹಿಂದೆ ಕೋಚ್ ಹುದ್ದೆಗೆ ರಾಜೀನಾಮೆಯಿತ್ತು ಹೊರ ಬಂದಿದ್ದ ಅನಿಲ್ ಕುಂಬ್ಳೆ ಇದೀಗ ತಮ್ಮ ಹುಡುಗರ ಬಗ್ಗೆ ಆತ್ಮವಿಶ್ವಾಸದ ಮಾತನಾಡಿದ್ದಾರೆ.
ಇಂಗ್ಲೆಂಡ್ ಸರಣಿಗೆ ಹೊರಟಿರುವ ಕ್ರಿಕೆಟಿಗರಿಗೆ ವಿಶ್ ಮಾಡಿರುವ ಕುಂಬ್ಳೆ ಇವರು ಇದೇ ಮೊದಲ ಬಾರಿಗೆ ಇಂಗ್ಲೆಂಡ್ ಪ್ರವಾಸ ಮಾಡುತ್ತಿಲ್ಲ. ಅಲ್ಲಿನ ಪರಿಸ್ಥಿತಿಯ ಅರಿವು ಅವರಿಗೆ ಚೆನ್ನಾಗಿಯೇ ಇರುತ್ತದೆ. ಇದು ನಮ್ಮ ಹುಡುಗರಿಗೆ ಗೆಲ್ಲಲು ಸಿಕ್ಕಿರುವ ಸುವರ್ಣಾವಕಾಶ ಎಂದಿದ್ದಾರೆ.
ಅಷ್ಟೇ ಅಲ್ಲದೆ, ಭಾರತೀಯ ಸ್ಪಿನ್ನರ್ ಗಳು ಇಂಗ್ಲೆಂಡ್ ಆಟಗಾರರಿಗೆ ಸಾಕಷ್ಟು ಕಾಡಲು ಸಾಮರ್ಥ್ಯವುಳ್ಳವರಾಗಿದ್ದಾರೆ ಎಂದೂ ಮಾಜಿ ಕೋಚ್ ಅಭಿಪ್ರಾಯಪಟ್ಟಿದ್ದಾರೆ. ಈ ನಡುವೆ ವಿವಾದಾತ್ಮಕ ಯೋ ಯೋ ಫಿಟ್ನೆಸ್ ಟೆಸ್ಟ್ ಪರವಾಗಿ ಮಾತನಾಡಿರುವ ಕುಂಬ್ಳೆ, ಒಂದು ವ್ಯವಸ್ಥೆಯಿದ್ದರೆ ಅದನ್ನು ಗೌರವಿಸಬೇಕು ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.