Select Your Language

Notifications

webdunia
webdunia
webdunia
webdunia

Anil Kumble Birthday: ಅನಿಲ್ ಕುಂಬ್ಳೆ ಮೂಲತಃ ಎಲ್ಲಿಯವರು ಗೊತ್ತಾ

Anil Kumble

Krishnaveni K

ಬೆಂಗಳೂರು , ಗುರುವಾರ, 17 ಅಕ್ಟೋಬರ್ 2024 (09:47 IST)
Photo Credit: X
ಬೆಂಗಳೂರು: ವಿಶ್ವದ ದಿಗ್ಗಜ ಸ್ಪಿನ್ನರ್ ಗಳ ಪಟ್ಟಿಯಲ್ಲಿ ನಮ್ಮ ಹೆಮ್ಮೆಯ ಕನ್ನಡಿಗ ಅನಿಲ್ ಕುಂಬ್ಳೆಯವರ ಹೆಸರೂ ಬರುತ್ತದೆ. ಅವರಿಗೆ ಇಂದು ಜನ್ಮದಿನದ ಸಂಭ್ರಮ. ಅಷ್ಟಕ್ಕೂ ಅನಿಲ್ ಕುಂಬ್ಳೆ ಮೂಲತಃ ಎಲ್ಲಿಯವರು ಗೊತ್ತಾ?

ಅನಿಲ್ ಕುಂಬ್ಳೆ ಇಂದು 54 ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ. ಒಟ್ಟು 18 ವರ್ಷಗಳ ಸುದೀರ್ಘ ವೃತ್ತಿ ಬದುಕು ನಡೆಸಿದ್ದ ಅನಿಲ್ ಕುಂಬ್ಳೆ ಟೆಸ್ಟ್ ಕ್ರಿಕೆಟ್ ನಲ್ಲಿ 132 ಪಂದ್ಯಗಳನ್ನು ಆಡಿ 619 ವಿಕೆಟ್, 2506 ರನ್ ಗಳಿಸಿದ್ದಾರೆ. ಭಾರತದ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಧಿಕ ವಿಕೆಟ್ ಗಳಿಸಿದ ದಾಖಲೆ ಅವರದ್ದು.

ಅನಿಲ್ ಕುಂಬ್ಳೆ ಹುಟ್ಟಿದ್ದು, ಬೆಳೆದಿದ್ದು ಎಲ್ಲವೂ ಬೆಂಗಳೂರಿನಲ್ಲೇ. ಹಾಗಂತ ಅವರ ವಂಶದವರು ಮೂಲತಃ ಬೆಂಗಳೂರಿನವರೇ ಅಲ್ಲ. ಅನಿಲ್ ಪೂರ್ವಜರು ಗಡಿನಾಡು, ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯವರು. ಇಂದಿಗೂ ಅನಿಲ್ ಕುಂಬ್ಳೆ ಹೆಸರಿನಲ್ಲಿ ಆ ಊರಿನಲ್ಲಿ ಒಂದು ರಸ್ತೆಯೇ ಇದೆ. ಅಲ್ಲಿನ ದೇವಾಲಯಕ್ಕೆ ಅನಿಲ್ ಕುಂಬ್ಳೆ ಅಪರೂಪಕ್ಕೆ ಭೇಟಿ ನೀಡುತ್ತಾರೆ.

ಅವರ ತಂದೆ ಕೃಷ್ಣ ಸ್ವಾಮಿ ಮತ್ತು ತಾಯಿ ಸರೋಜ ಇಬ್ಬರೂ ಕಾಸರಗೋಡಿನ ಕುಂಬಳೆಯವರು. ಈ ಕಾರಣಕ್ಕಾಗಿಯೇ ಅವರ ಹೆಸರಿಜ ಮುಂದೆ ಕುಂಬ್ಳೆ ಎನ್ನುವ ಉಪನಾಮವೂ ಸೇರಿಕೊಂಡಿತು. ಆದರೆ ಅನಿಲ್ ಕುಂಬ್ಳೆ ತಮ್ಮ ಹುಟ್ಟಿನಿಂದ ಹಿಡಿದು ಶಾಲೆ, ಕಾಲೇಜು ಶಿಕ್ಷಣ, ಕ್ರಿಕೆಟ್ ಬದುಕು ಎಲ್ಲವನ್ನೂ ಬೆಂಗಳೂರಿನಲ್ಲಿಯೇ ಮಾಡಿದ್ದಾರೆ. ಈಗಲೂ ಅವರು ಬೆಂಗಳೂರು ನಿವಾಸಿಯೇ. ಆದರೆ ತಮ್ಮ ಪೋಷಕರ ಊರಿನ ಮೇಲೂ ಸದಾ ಪ್ರೀತಿ ಇಟ್ಟುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

IND vs NZ Test: ಕೊನೆಗೂ ಶುರುವಾಯ್ತು ಪಂದ್ಯ, ಟೀಂ ಇಂಡಿಯಾ ಬ್ಯಾಟಿಂಗ್