ಮುಂಬೈ: ಕಳಪೆ ಫಾರ್ಮ್ ನಿಂದಾಗಿ ಟೀಂ ಇಂಡಿಯಾದಿಂದ ಹೊರಬಿದ್ದ ಬೆನ್ನಲ್ಲೇ ಚೇತೇಶ್ವರ ಪೂಜಾರ, ಅಜಿಂಕ್ಯಾ ರೆಹಾನೆಗೆ ಮತ್ತೊಂದು ಶಾಕ್ ಎದುರಾಗಿದೆ.
									
			
			 
 			
 
 			
			                     
							
							
			        							
								
																	ಬಿಸಿಸಿಐ ಟೀಂ ಇಂಡಿಯಾ ಕ್ರಿಕೆಟಿಗರ ವೇತನ ಗುತ್ತಿಗೆ ನವೀಕರಿಸಿದ್ದು, ರೆಹಾನೆ, ಪೂಜಾರಗೆ ಎ ದರ್ಜೆಯಿಂದ ಬಿ ದರ್ಜೆಗೆ ಹಿಂಬಡ್ತಿ ನೀಡಲಾಗಿದೆ. ಅದೇ ರೀತಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಗೂ ಹಿಂಬಡ್ತಿ ನೀಡಲಾಗಿದ್ದು ಎ ದರ್ಜೆಯಿಂದ ಸಿ ದರ್ಜೆಗೆ ಹಿಂಬಡ್ತಿ ನೀಡಲಾಗಿದೆ.
									
										
								
																	ಎ ಪ್ಲಸ್ ದರ್ಜೆಗೆ ವಾರ್ಷಿಕ 7 ಕೋಟಿ ರೂ., ಎ ದರ್ಜೆಗೆ 5 ಕೋಟಿ ರೂ., ಬಿ ದರ್ಜೆಗೆ 3 ಕೋಟಿ ರೂ., ಸಿ ದರ್ಜೆಯ ಕ್ಯಾಟಗರಿಗೆ 1 ಕೋಟಿ ರೂ. ವೇತನ ಸಿಗಲಿದೆ.