Publish Date: Thu, 03 Mar 2022 (10:00 IST)
Updated Date: Thu, 03 Mar 2022 (10:22 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರು ಇತ್ತೀಚೆಗಿನ ದಿನಗಳಲ್ಲಿ ಪದೇ ಪದೇ ಗಾಯಕ್ಕೊಳಗಾಗುತ್ತಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಈ ಗಾಯದ ಸಮಸ್ಯೆಗೆ ಮುಲಾಮು ಹಚ್ಚಲು ಬಿಸಿಸಿಐ ಹೊಸ ತಂಡವನ್ನು ಸೇರ್ಪಡೆಗೊಳಿಸಲಿದೆ. ಎಲ್ಲಾ ಅಂದುಕೊಂಡಂತೆ ಆದರೆ ನಿತಿನ್ ಪಟೇಲ್ ನೇತೃತ್ವದ ಟೀಂ ಇಂಡಿಯಾ ಫಿಸಿಯೋ ತಂಡಕ್ಕೆ ಹೊಸ ಸದಸ್ಯರು ಶೀಘ್ರದಲ್ಲೇ ನೇಮಕವಾಗಲಿದ್ದಾರೆ.
ಮೆಂಟಲ್ ಕಂಡೀಷನಿಂಗ್ ಕೋಚ್ ಮತ್ತು ಪುನಶ್ಚೇತನ ಕಾರ್ಯ ನಿರ್ವಹಿಸಲು ಹೊಸ ತಜ್ಞರನ್ನು ನೇಮಕ ಮಾಡಲು ಬಿಸಿಸಿಐ ಕಾರ್ಯಾರಂಭಿಸಿದೆ. ಪದೇ ಪದೇ ಗಾಯಕ್ಕೊಳಗಾಗುತ್ತಿದ್ದರಿಂದ ಆಟಗಾರರಿಂದಲೂ ದೂರು ಬಂದ ಹಿನ್ನಲೆಯಲ್ಲಿ ಬಿಸಿಸಿಐ ಕ್ರಮಕ್ಕೆ ಮುಂದಾಗಿದೆ.