ಮುಂಬೈ: ಧೋನಿ ಐಪಿಎಲ್ ನಾಯಕತ್ವಕ್ಕೆ ವಿದಾಯ ಘೋಷಿಸಿದ್ದರಿಂದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾರ ದಾಖಲೆ ಸೇಫ್ ಆಗಿದೆ.
									
			
			 
 			
 
 			
			                     
							
							
			        							
								
																	ಐಪಿಎಲ್ ನಲ್ಲಿ ಗರಿಷ್ಠ ಟೈಟಲ್ ಗರಿಮೆ ರೋಹಿತ್ ಶರ್ಮಾರದ್ದಾಗಿದೆ. ರೋಹಿತ್ ನಾಯಕರಾಗಿ ಐದು ಬಾರಿ ಪ್ರಶಸ್ತಿ ಗೆದ್ದರೆ ಧೋನಿ ತಮ್ಮ ನಾಯಕತ್ವದಲ್ಲಿ ನಾಲ್ಕು ಬಾರಿ ಪ್ರಶಸ್ತಿ ಗೆದ್ದು ದಾಖಲೆ ಮಾಡಿದ್ದಾರೆ.
									
										
								
																	ಒಂದು ವೇಳೆ ಧೋನಿ ಈ ಬಾರಿ ನಾಯಕರಾಗಿ ಸಿಎಸ್ ಕೆ ತಂಡವನ್ನು ಮತ್ತೆ ಚಾಂಪಿಯನ್ ಮಾಡುತ್ತಿದ್ದರೆ ಈ ದಾಖಲೆಯನ್ನು ಧೋನಿ ಸರಿಗಟ್ಟುತ್ತಿದ್ದರು. ಆದರೆ ಈಗ ಆ ದಾಖಲೆ ರೋಹಿತ್ ಬಳಿಯಲ್ಲೇ ಉಳಿದುಕೊಳ್ಳಲಿದೆ.