Select Your Language

Notifications

webdunia
webdunia
webdunia
webdunia

ಟಿ-20ಯಲ್ಲಿ ದ್ವಿಶತಕ ಸಿಡಿಸಿದ ಆಫ್ಘಾನಿಸ್ತಾನ ಕ್ರಿಕೆಟಿಗ

ಟಿ-20ಯಲ್ಲಿ ದ್ವಿಶತಕ ಸಿಡಿಸಿದ ಆಫ್ಘಾನಿಸ್ತಾನ ಕ್ರಿಕೆಟಿಗ
ಕಾಬುಲ್ , ಮಂಗಳವಾರ, 11 ಜುಲೈ 2017 (14:27 IST)
ವಿಶ್ವ ಕ್ರಿಕೆಟ್`ನಲ್ಲಿ ಗಮನ ಸೆಳೆಯುತ್ತಿರುವ ಆಫ್ಘಾನಿಸ್ತಾನದ ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ಈಗಾಗಲೇ ತಮ್ಮ ಪ್ರತಿಭೆಯನ್ನ ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಿದ್ದಾರೆ.ಇದೀಗ, ಮತ್ತೊಬ್ಬ ಆಫ್ಘಾನಿಸ್ತಾನದ ಯುವ ಕ್ರಿಕೆಟಿಗ ಟಿ-20 ಕ್ರಿಕೆಟ್`ನಲ್ಲಿ ದ್ವಿಶತಕ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾನೆ.
 

ಆಫ್ಘಾನಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್`ಮನ್ ಶಫಿಕುಲ್ಲಾ ಶಫಾಕ್ 71 ಎಸೆತಗಳಲ್ಲಿ 214 ರನ್ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾನೆ. ದೇಶೀಯ ಪರಗಾನ್ ಚಾಂಪಯನ್ಸ್ ಟ್ರೋಫಿಯಲ್ಲಿ ಶಫಾಕ್ 21 ಶತಕ ಮತ್ತು 16 ಬೌಂಡರಿ ಸಹಿತ 214 ರನ್ ಸಿಡಿಸಿದ್ದಾರೆ. ಶಫಾಕ್ 214 ನೆರವಿನಿಂದ ಕಟೀಜ್ ಕ್ರಿಕೆಟ್ ಅಕಾಡೆಮಿ ತಂಡ 20 ಓವರ್`ಗಳಲ್ಲಿ 351 ರನ್ ಕಲೆಹಾಕಿತ್ತು.

ಬೃಹತ್ ಮೊತ್ತ ಬೆನ್ನತ್ತಿದ್ದ ಕಾಬುಲ್ ಸ್ಟಾರ್ ಕ್ರಿಕೆಟ್ ಕ್ಲಬ್ 107 ರನ್`ಗಳಿಗೆ ಆಲೌಟ್ ಆಗುವ ಮೂಲಕ ಶಫಾಕ್ ತಂಡ 244 ರನ್`ಗಳ ಭಾರೀ ಅಂತರದ ಜಯ ದಾಖಲಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದೇ ಟೀಂ ಇಂಡಿಯಾ ಕೋಚ್ ಘೋಷಣೆ?