Publish Date: Tue, 11 Jul 2017 (11:53 IST)
Updated Date: Tue, 11 Jul 2017 (11:54 IST)
ಮುಂಬೈ: ಐವರು ಅಭ್ಯರ್ಥಿಗಳ ಸಂದರ್ಶನ ನಡೆಸಿದ ಹಿನ್ನಲೆಯಲ್ಲಿ ಇಂದೇ ಟೀಂ ಇಂಡಿಯಾದ ಹೊಸ ಕೋಚ್ ಹೆಸರು ಘೋಷಣೆ ಮಾಡಿ ಎಂದು ಸುಪ್ರೀಂ ಕೋರ್ಟ್ ನೇಮಿತ ಆಡಳಿತ ಮಂಡಳಿ ಬಿಸಿಸಿಐಗೆ ಸಲಹೆ ಮಾಡಿದೆ ಎಂದು ವರದಿಯಾಗಿದೆ.
ಇದಕ್ಕೂ ಮೊದಲು ಕ್ರಿಕೆಟ್ ಸಲಹಾ ಸಮಿತಿ ಸದಸ್ಯ ಸೌರವ್ ಗಂಗೂಲಿ, ಕೆಲವು ದಿನಗಳ ನಂತರ ಕೋಚ್ ಯಾರೆಂದು ಘೋಷಣೆ ಮಾಡುವುದಾಗಿ ಹೇಳಿದ್ದರು. ವಿರಾಟ್ ಕೊಹ್ಲಿ ಬಳಿ ವಿವರವಾಗಿ ಚರ್ಚಿಸಿದ ನಂತರ ತೀರ್ಮಾನ ಕೈಗೊಳ್ಳುವುದಾಗಿ ಅವರು ಹೇಳಿದ್ದರು.
ಆದರೆ ಇದೀಗ ಕ್ರಿಕೆಟ್ ಆಡಳಿತ ಮಂಡಳಿ ಕೋಚ್ ಘೋಷಣೆಯನ್ನು ತಡ ಮಾಡುವುದು ಬೇಡ ಎಂದು ಸಲಹೆ ಮಾಡಿದೆ ಎನ್ನಲಾಗಿದೆ. ಸದ್ಯಕ್ಕೆ ತಂಡದ ವ್ಯವಸ್ಥಾಪಕರಾಗಿರುವ ಶ್ರೀಧರ್ ಶ್ರೀಲಂಕಾ ಪ್ರವಾಸದಲ್ಲಿ ತಂಡದ ಜವಾಬ್ದಾರಿ ಹೊರಲಿದ್ದಾರೆ ಎಂದು ಗಂಗೂಲಿ ಹೇಳಿದ್ದರು. ಆದರೆ ಕ್ರಿಕೆಟ್ ಆಡಳಿತ ಮಂಡಳಿ ಸಲಹೆಗೆ ಬಿಸಿಸಿಐ ಮನ್ನಣೆ ನೀಡುತ್ತಾ ನೋಡಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ