Select Your Language

Notifications

webdunia
webdunia
webdunia
webdunia

ಎರಡನೇ ಟಿ 20: ಭಾರತಕ್ಕೆ ಜಿಂಬಾಬ್ವೆ ವಿರುದ್ಧ ಗೆಲುವು, 1-1 ಸಮ

ಎರಡನೇ ಟಿ 20: ಭಾರತಕ್ಕೆ ಜಿಂಬಾಬ್ವೆ ವಿರುದ್ಧ ಗೆಲುವು, 1-1 ಸಮ
ಹರಾರೆ , ಸೋಮವಾರ, 20 ಜೂನ್ 2016 (19:27 IST)
ಭಾರತ ತಂಡ ಜಿಂಬಾಬ್ವೆ ವಿರುದ್ಧ ಟಿ 20 ಎರಡನೇ ಪಂದ್ಯದಲ್ಲಿ 10ವಿಕೆಟ್‌ಗಳಿಂದ ಭರ್ಜರಿ ಜಯಗಳಿಸುವ ಮೂಲಕ ಮೊದಲ ಟಿ 20 ಸೋಲಿನ ಸೇಡನ್ನು ತೀರಿಸಿಕೊಂಡಿದೆ. ಇದರಿಂದ ಟಿ 20 ಸರಣಿಯಲ್ಲಿ ಭಾರತ , ಜಿಂಬಾಬ್ವೆ 1-1ರಿಂದ ಸಮವಾಗಿದ್ದು, ಮೂರನೇ ಪಂದ್ಯದ ವಿಜೇತರು ಪ್ರಶಸ್ತಿ ಗೆಲ್ಲಲಿದ್ದಾರೆ.

ಯುವಆಟಗಾರರಿಂದ ಕೂಡಿದ ತಂಡ ಮೊದಲ ಏಕದಿನದಲ್ಲಿ ಕೇವಲ 2 ರನ್ ಅಂತರದಿಂದ ಸೋಲಪ್ಪಿತ್ತು. ಆದರೆ ಎರಡನೇ ಟಿ 20ಯಲ್ಲಿ ಬುಮ್ರಾ ಮತ್ತು ಸ್ರಾನ್ ಅವರ ಮಾರಕ ಬೌಲಿಂಗ್ ದಾಳಿಗೆ ಸಿಕ್ಕಿದ ಜಿಂಬಾಬ್ವೆ 99 ರನ್ ಮಾತ್ರ ಗಳಿಸಲು ಸಾಧ್ಯವಾಯಿತು.

ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ಭಾರತದ ಲೋಕೇಶ್ ರಾಹುಲ್ ಮತ್ತು ಮಂದೀಪ್ ಸಿಂಗ್ ಕೊನೆಯವರೆಗೆ ಉತ್ತಮ ಜತೆಯಾಟವಾಡಿ 13. 1 ಓವರುಗಳಲ್ಲಿ 103 ರನ್ ಮೂಲಕ ಜಿಂಬಾಬ್ವೆ ಗುರಿಯನ್ನು ಸುಲಭವಾಗಿ ಮುಟ್ಟಿದರು.  ಮೊದಲ ಏಕದಿನದಲ್ಲಿ ಮೊದಲ ಎಸೆತದಲ್ಲೇ ಔಟಾಗಿದ್ದ ರಾಹುಲ್ ಈ ಬಾರಿ 40 ಎಸೆತಗಳಲ್ಲಿ 47 ಅತ್ಯಮೂಲ್ಯ ರನ್‌ಗಳನ್ನು ಮತ್ತು ಮಂದೀಪ್ ಸಿಂಗ್ 40 ಎಸೆತಕ್ಕೆ 52 ರನ್ ಬಿರುಸಿನ ಸ್ಕೋರ್ ಮಾಡಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಪಂದ್ಯಕ್ಕೆ ಮಳೆರಾಯನ ಕಾಟ, ಡ್ರಾ ಘೋಷಣೆ