Select Your Language

Notifications

webdunia
webdunia
webdunia
Sunday, 2 March 2025
webdunia

ಧೋನಿ ದಾಖಲೆ ಮುರಿದ ರಿಷಬ್ ಪಂತ್

ಧೋನಿ ದಾಖಲೆ ಮುರಿದ ರಿಷಬ್ ಪಂತ್
ಹೈದರಾಬಾದ್ , ಸೋಮವಾರ, 15 ಅಕ್ಟೋಬರ್ 2018 (08:08 IST)
ಹೈದರಾಬಾದ್: ಸೀಮಿತ ಓವರ್ ಗಳ ಪಂದ್ಯಗಳಲ್ಲೂ ಧೋನಿ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ರಿಷಬ್ ಪಂತ್ ವೆಸ್ಟ್ ಇಂಡೀಸ್ ವಿರುದ್ಧ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಧೋನಿ ದಾಖಲೆ ಮುರಿದಿದ್ದಾರೆ.

ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಸಿಕ್ಸರ್ ಮೂಲಕ ದಾಖಲೆಯ ಆರಂಭ ಪಡೆದಿದ್ದ ರಿಷಬ್ ಪಂತ್ ಇದುವರೆಗೆ ಐದು ಟೆಸ್ಟ್ ಪಂದ್ಯದಲ್ಲಿ ಆಡಿದ್ದಾರೆ. ಈ ಆರಂಭಿಕ ಐದು ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಆಗಿ ಗರಿಷ್ಠ ರನ್ ದಾಖಲಿಸಿದ ಕೀರ್ತಿ ಇದೀಗ ಪಂತ್ ಪಾಲಾಗಿದೆ. ಇದಕ್ಕೂ ಮೊದಲು ಈ ದಾಖಲೆ ಧೋನಿ ಹೆಸರಿನಲ್ಲಿತ್ತು.

ವಿಂಡೀಸ್ ವಿರುದ್ಧ ಹೈದರಾಬಾದ್ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 92 ರನ್ ಗಳಿಗೆ ಔಟಾದ ರಿಷಬ್ ಈ ದಾಖಲೆ ಮಾಡಿದ್ದಾರೆ. ಪಂತ್ ಇದುವರೆಗೆ 346 ರನ್ ಗಳಿಸಿದ್ದಾರೆ. ಧೋನಿ ಮೊದಲ ಐದು ಟೆಸ್ಟ್ ಪಂದ್ಯಗಳಿಂದ 297 ರನ್ ಗಳಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್ ಫಾರ್ಮ್ ಕಂಡುಕೊಳ್ಳಲು ಸಹಾಯ ಮಾಡಿದವರು ಯಾರು ಗೊತ್ತೇ?!