ಸೀತೆ ಇದ್ದ ಅಶೋಕವನಕ್ಕೆ ಟೀಮ್ ಇಂಡಿಯಾ ಆಟಗಾರರ ಭೇಟಿ

ಶುಕ್ರವಾರ, 11 ಆಗಸ್ಟ್ 2017 (14:13 IST)

ಶ್ರೀಲಂಕಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಸದಸ್ಯರು ರಾಮಾಯಣದಲ್ಲಿ ಉಲ್ಲೇಖವಾಗಿರುವ ಸೀತಾ ಮಾತೆಯನ್ನ ರಾವಣ ಅಪಹರಿಸಿ ಬಚ್ಚಿಟ್ಟಿದ್ದ ಅಶೋಕ ವನಕ್ಕೆ ಭೇಟಿ ನೀಡಿದ್ಧಾರೆ.

 

ವೇಗಿಗಳಾದ ಮೊಹಮ್ಮದ್ ಶಮಿ, ಉಮೇಶ್ ಯಾದವ್ ಅಶೋಕ ವನಕ್ಕೆ ಪತ್ನಿ ಸಮೇತರಾಗಿ ಭೇಟಿ ನೀಡಿದ್ದ ಪೋಟೋಗಳನ್ನ ಅವರ ಟ್ವಿಟ್ಟರ್ ಹ್ಯಾಂಡಲ್`ನಲ್ಲಿ ಪೋಸ್ಟ್ ಮಾಡಿದ್ಧಾರೆ.  ಕುಲ್ದೀಪ್ ಯಾದವ್, ವೃದ್ಧಿಮಾನ್ ಸಹಾ, ಇಶಾಂತ್ ಶರ್ಮಾ, ಕೆ.ಎಲ್, ರಾಹುಲ್ ಸಹ ಭೇಟಿ ನೀಡಿದ್ದರು.

 

ವೇಗಿ ಉಮೇಶ್ ಯಾದವ್ ತಮ್ಮ ಇನ್`ಸ್ಟಾಗ್ರಾಮ್ ಅಕೌಂಟ್`ನಲ್ಲಿ ಆಂಜನೇಯ ಪಾದದ ದೃಶ್ಯ ಶೂಟ್ ಮಾಡಿ ಪೋಸ್ಟ್ ಮಾಡಿದ್ಧಾರೆ. ಆದರೆ, ನಾಯಕ ವಿರಾಟ್ ಕೊಹ್ಲಿ ಸಹ ಯಾವುದೇ ಫೋಟೋದಲ್ಲಿ ಕಾಣುತ್ತಿಲ್ಲ.

 

ಶ್ರೀಲಂಕಾ ವಿರುದ್ಧ ಎರಡು ಟೆಸ್ಟ್ ಗೆದ್ದು ಸರಣಿ ಕೈವಶಮಾಡಿಕೊಂಡಿರುವ ಟೀಮ್ ಇಂಡಿಯಾ ಶನಿವಾರದಿಂದ ಕೊನೆಯ ಟೆಸ್ಟ್ ಪಂದ್ಯವನ್ನಾಡಲಿದೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

 

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಶ್ರೀಲಂಕಾ ಏಕದಿನಕ್ಕೆ ಟೀಂ ಇಂಡಿಯಾ ಜೋಡಿಗೆ ರೆಸ್ಟ್?