Publish Date: Fri, 11 Aug 2017 (11:40 IST)
Updated Date: Fri, 11 Aug 2017 (11:42 IST)
ಮುಂಬೈ: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಮುಗಿದ ಮೇಲೆ ನಡೆಯಲಿರುವ ಏಕದಿನ ಸರಣಿಗೆ ಟೀಂ ಇಂಡಿಯಾದ ಸ್ಪಿನ್ ಜೋಡಿ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಗೆ ವಿಶ್ರಾಂತಿ ನೀಡಲು ಆಯ್ಕೆಗಾರರು ಚಿಂತನೆ ನಡೆಸಿದ್ದಾರೆ.
ಭಾನುವಾರ ಏಕದಿನ ಸರಣಿಗೆ ತಂಡದ ಆಯ್ಕೆ ನಡೆಯಲಿದ್ದು, ಜಡೇಜಾ ಮತ್ತು ಅಶ್ವಿನ್ ಸತತ ಕ್ರಿಕೆಟ್ ನಿಂದ ಬಳಲಿರುವುದರಿಂದ ವಿಶ್ರಾಂತಿ ನೀಡಲು ಆಯ್ಕೆಗಾರರು ಚಿಂತನೆ ನಡೆಸಿದ್ದಾರೆ.
ಇವರಿಬ್ಬರು ಹಿರಿಯ ಸ್ಪಿನ್ನರ್ ಗಳ ಅನುಪಸ್ಥಿತಿಯಲ್ಲಿ ಯುವ ಆಟಗಾರರಿಗೆ ಅವಕಾಶ ದೊರೆಯಲಿದೆ. ಯಜುವೇಂದ್ರ ಚಾಹಲ್, ಕೃಣಾಲ್ ಪಾಂಡ್ಯ ಮತ್ತು ಅಕ್ಸರ್ ಪಟೇಲ್ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಜಡೇಜಾ ಮತ್ತು ಅಶ್ವಿನ್ ಜತೆಗೆ ಮೊಹಮ್ಮದ್ ಶಮಿಗೂ ವಿಶ್ರಾಂತಿ ಸಿಗುವ ಸಾಧ್ಯತೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ