ಮಹಿಳೆಯರಿಗೆ ಲಾಕ್ ಡೌನ್ ಹೊರೆ!

Webdunia
ಸೋಮವಾರ, 20 ಏಪ್ರಿಲ್ 2020 (09:29 IST)
ಬೆಂಗಳೂರು: ಲಾಕ್ ಡೌನ್ ಕೊರೋನಾ ಹರಡುವಿಕೆ ತಡೆಯಲು ಸಹಾಯ ಮಾಡಿರಬಹುದು. ಉದ್ಯೋಗಸ್ಥ ಪುರುಷರೂ ಕೆಲವು ದಿನ ಹಾಯಾಗಿ ಮನೆಯಲ್ಲಿರಬಹುದು. ಆದರೆ ಹೊರೆಯಾಗಿರುವುದು ಮಹಿಳೆಯರಿಗೆ!


ಅದರಲ್ಲೂ ಉದ್ಯೋಗಸ್ಥ ಮಹಿಳೆಯರಂತೂ ಮನೆಯಲ್ಲಿದ್ದುಕೊಂಡು ಗಂಡ-ಮಕ್ಕಳನ್ನು ಸಂಭಾಳಿಸುವುದರ ಜತೆಗೆ ಅತ್ತ ಮನೆಕೆಲಸ, ಇತ್ತ ಕಛೇರಿ ಕೆಲಸದ ನಡುವೆ ಸಮಯ ಹೊಂದಿಕೆ ಮಾಡುವುದರಲ್ಲಿ ಹೈರಾಣಾಗಿ ಹೋಗುತ್ತಾರೆ. ರಾತ್ರಿ ಮಲಗುವ ಮುಂಚೆ ಅಬ್ಬಾ ಕೊನೆಗೂ ಇಂದಿನ ದಿನ ಮುಗಿಯಿತು ಎಂದು ನಿಟ್ಟುಸಿರು ಬಿಡುವ ಹಾಗಾಗಿದೆ.

ಪಕ್ಕಾ ಗೃಹಿಣಿಯರಿಗೂ ಈಗ ಲಾಕ್ ಡೌನ್ ನಿಂದಾಗಿ ಬಿಡುವಿಲ್ಲದಂತಾಗಿದೆ. ಮೊದಲಾಗಿದ್ದರೆ ಗಂಡ ಆಫೀಸ್ ಗೆ ಹೋಗುವ ಮೊದಲು ಅಡುಗೆ ಮಾಡಿ ಮುಗಿಸಿದರೆ, ಎಲ್ಲರೂ ಹೋದ ಮೇಲೆ ಕೆಲವು ಕಾಲ ಮನೆ ಕ್ಲೀನಿಂಗ್ ಮಾಡಿದರೆ ಕೆಲವು ಸಮಯವಾದರೂ ತಮಗಾಗಿ ಉಳಿಯುತ್ತಿತ್ತು. ಆ ಸಮಯದಲ್ಲಿ ತಮಗಿಷ್ಟ ಬಂದ ಹಾಗೆ ಮೊಬೈಲ್, ಟಿವಿ ನೋಡಿಕೊಂಡು ಆರಾಮವಾಗಿರಬಹುದಿತ್ತು.

ಆದರೆ ಈಗ ಮನೆಯವರೆಲ್ಲಾ ಮನೆಯಲ್ಲೇ ಉಳಿಯುವಂತಾದ ಮೇಲೆ ಪ್ರತಿನಿತ್ಯ ಅವರ ಬಾಯಿ ಚಪಲ ನೀಗಿಸಲು ಥರ ಥರದ ಅಡುಗೆಯಾಗಬೇಕು. ಹೇಳಿ ಕೇಳಿ ಬೇಸಿಗೆ ಬೇರೆ. ಆಗಾಗ ಪಾನೀಯ ವ್ಯವಸ್ಥೆಯಾಗಬೇಕು. ಮನೆ ಒಂದು ಕಡೆಯಿಂದ ಕ್ಲೀನ್ ಮಾಡಿದರೆ ಮತ್ತೊಂದು ಕಡೆಯಿಂದ ಕಸ ತುಂಬುವ ಮಕ್ಕಳು..ಹಾಳಾಗಿ ಹೋಗ್ಲಿ ಎಂದು ಒಂದು ಕ್ಷಣ ಶಾಂತಿಯಿಂದ ಮಲಗೋಣವೆಂದರೆ ಗಂಡ-ಮಕ್ಕಳ ನಡುವೆ ರಿಮೋಟ್ ಗಾಗಿ ಕಿತ್ತಾಟ! ಅಬ್ಬಾ.. ಯಾಕಾದರೂ ದಿನ ಬೆಳಗಾಗುತ್ತೋ ಎಂದು ಬೇಸರದಿಂದಲೇ ದಿನ ಆರಂಭಿಸುವ ಹಾಗಾಗಿದೆ. ಈ ಕಾರಣಕ್ಕಾದರೂ ಬೇಗ ಲಾಕ್ ಡೌನ್ ಮುಗಿಯಲಪ್ಪಾ ಎಂದು ಮಹಿಳೆಯರು ಪ್ರಾರ್ಥಿಸುವಂತಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ರಾತ್ರಿಯ ಆಹಾರ ಕ್ರಮದಲ್ಲಿ ಈ ಬದಲಾವಣೆ ಮಾಡಿ, ತೂಕದಲ್ಲಿ ಬದಲಾವಣೆ ನೋಡಿ

ಏನಿದು ಮಂಗನ ಕಾಯಿಲೆ, ಇದರ ಲಕ್ಷಣಗಳೇನು, ಇಲ್ಲಿದೆ ಸಂಪೂರ್ಣ ವಿವರ

ಉತ್ತಮ ಆರೋಗ್ಯಕ್ಕೆ ಮಧ್ಯಾಹ್ನದ ಊಟದ ಸಮಯ ಹೀಗಿರಲಿ

ಉತ್ತಮ ಆರೋಗ್ಯಕ್ಕೆ ಊಟದ ಬಳಿಕ ಹೀಗಿರಲಿ ಚಟುವಟಿಕೆ

ಕುಕ್ಕರ್ ಬ್ಲಾಸ್ಟ್ ಆಗುವ ಸೂಚನೆ ಕೊಡುವ ಲಕ್ಷಣಗಳಿವು

ಮುಂದಿನ ಸುದ್ದಿ
Show comments