Select Your Language

Notifications

webdunia
webdunia
webdunia
webdunia

ಮಹಿಳೆಯರಿಗೆ ಲಾಕ್ ಡೌನ್ ಹೊರೆ!

ಮಹಿಳೆಯರಿಗೆ ಲಾಕ್ ಡೌನ್ ಹೊರೆ!
ಬೆಂಗಳೂರು , ಸೋಮವಾರ, 20 ಏಪ್ರಿಲ್ 2020 (09:29 IST)
ಬೆಂಗಳೂರು: ಲಾಕ್ ಡೌನ್ ಕೊರೋನಾ ಹರಡುವಿಕೆ ತಡೆಯಲು ಸಹಾಯ ಮಾಡಿರಬಹುದು. ಉದ್ಯೋಗಸ್ಥ ಪುರುಷರೂ ಕೆಲವು ದಿನ ಹಾಯಾಗಿ ಮನೆಯಲ್ಲಿರಬಹುದು. ಆದರೆ ಹೊರೆಯಾಗಿರುವುದು ಮಹಿಳೆಯರಿಗೆ!


ಅದರಲ್ಲೂ ಉದ್ಯೋಗಸ್ಥ ಮಹಿಳೆಯರಂತೂ ಮನೆಯಲ್ಲಿದ್ದುಕೊಂಡು ಗಂಡ-ಮಕ್ಕಳನ್ನು ಸಂಭಾಳಿಸುವುದರ ಜತೆಗೆ ಅತ್ತ ಮನೆಕೆಲಸ, ಇತ್ತ ಕಛೇರಿ ಕೆಲಸದ ನಡುವೆ ಸಮಯ ಹೊಂದಿಕೆ ಮಾಡುವುದರಲ್ಲಿ ಹೈರಾಣಾಗಿ ಹೋಗುತ್ತಾರೆ. ರಾತ್ರಿ ಮಲಗುವ ಮುಂಚೆ ಅಬ್ಬಾ ಕೊನೆಗೂ ಇಂದಿನ ದಿನ ಮುಗಿಯಿತು ಎಂದು ನಿಟ್ಟುಸಿರು ಬಿಡುವ ಹಾಗಾಗಿದೆ.

ಪಕ್ಕಾ ಗೃಹಿಣಿಯರಿಗೂ ಈಗ ಲಾಕ್ ಡೌನ್ ನಿಂದಾಗಿ ಬಿಡುವಿಲ್ಲದಂತಾಗಿದೆ. ಮೊದಲಾಗಿದ್ದರೆ ಗಂಡ ಆಫೀಸ್ ಗೆ ಹೋಗುವ ಮೊದಲು ಅಡುಗೆ ಮಾಡಿ ಮುಗಿಸಿದರೆ, ಎಲ್ಲರೂ ಹೋದ ಮೇಲೆ ಕೆಲವು ಕಾಲ ಮನೆ ಕ್ಲೀನಿಂಗ್ ಮಾಡಿದರೆ ಕೆಲವು ಸಮಯವಾದರೂ ತಮಗಾಗಿ ಉಳಿಯುತ್ತಿತ್ತು. ಆ ಸಮಯದಲ್ಲಿ ತಮಗಿಷ್ಟ ಬಂದ ಹಾಗೆ ಮೊಬೈಲ್, ಟಿವಿ ನೋಡಿಕೊಂಡು ಆರಾಮವಾಗಿರಬಹುದಿತ್ತು.

ಆದರೆ ಈಗ ಮನೆಯವರೆಲ್ಲಾ ಮನೆಯಲ್ಲೇ ಉಳಿಯುವಂತಾದ ಮೇಲೆ ಪ್ರತಿನಿತ್ಯ ಅವರ ಬಾಯಿ ಚಪಲ ನೀಗಿಸಲು ಥರ ಥರದ ಅಡುಗೆಯಾಗಬೇಕು. ಹೇಳಿ ಕೇಳಿ ಬೇಸಿಗೆ ಬೇರೆ. ಆಗಾಗ ಪಾನೀಯ ವ್ಯವಸ್ಥೆಯಾಗಬೇಕು. ಮನೆ ಒಂದು ಕಡೆಯಿಂದ ಕ್ಲೀನ್ ಮಾಡಿದರೆ ಮತ್ತೊಂದು ಕಡೆಯಿಂದ ಕಸ ತುಂಬುವ ಮಕ್ಕಳು..ಹಾಳಾಗಿ ಹೋಗ್ಲಿ ಎಂದು ಒಂದು ಕ್ಷಣ ಶಾಂತಿಯಿಂದ ಮಲಗೋಣವೆಂದರೆ ಗಂಡ-ಮಕ್ಕಳ ನಡುವೆ ರಿಮೋಟ್ ಗಾಗಿ ಕಿತ್ತಾಟ! ಅಬ್ಬಾ.. ಯಾಕಾದರೂ ದಿನ ಬೆಳಗಾಗುತ್ತೋ ಎಂದು ಬೇಸರದಿಂದಲೇ ದಿನ ಆರಂಭಿಸುವ ಹಾಗಾಗಿದೆ. ಈ ಕಾರಣಕ್ಕಾದರೂ ಬೇಗ ಲಾಕ್ ಡೌನ್ ಮುಗಿಯಲಪ್ಪಾ ಎಂದು ಮಹಿಳೆಯರು ಪ್ರಾರ್ಥಿಸುವಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವೀರ್ಯಾಣು ಸಂಖ್ಯೆ ಹೆಚ್ಚಿಸಲು ಏನು ಮಾಡಬೇಕು?