ದೇಶದೆಲ್ಲೆಡೆ ಜನತಾ ಕರ್ಫ್ಯೂ ಜಾರಿಯಲ್ಲಿದ್ದರೆ, ಈ ಊರಲ್ಲಿ ಮಾತ್ರ ಚಿಕನ್ ಮಾಡಿಕೊಂಡು ತಿನ್ನೋನಾ ಅಂತ ನೂರಾರು ಜನರು ಕೋಳಿಗಳ ಖರೀದಿಗೆ ಮುಗಿಬಿದ್ದಿದ್ದರು.
ಕೊರೊನಾ ವೈರಸ್ ಹಾಗೂ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿರುವ ಹಕ್ಕಿಜ್ವರದಿಂದಾಗಿ ಕೋಳಿ ಖದೀರಿಗೆ ಜನರು ಆಸಕ್ತಿ ವಹಿಸುತ್ತಿಲ್ಲ.
ಹೀಗಾಗಿ ಫಾರಂಗಳಲ್ಲಿದ್ದ ಕೋಳಿಗಳನ್ನು ಹೇಗಾದರೂ ಮಾಡಿ ಮಾರಾಟ ಮಾಡಬೇಕು ಎಂದುಕೊಂಡಿದ್ದ ಮಾಲೀಕ ಕೊನೆಗೊಂದು ಐಡಿಯಾ ಮಾಡಿದ್ದಾನೆ.
ಜನತಾ ಕರ್ಫ್ಯೂ ಇದ್ದಾಗಲೇ ಕೋಳಿಯೊಂದಕ್ಕೆ ಕೇವಲ 100 ರೂಪಾಯಿಗೆ ಮಾರಾಟ ಮಾಡಲಾರಂಭಿಸಿದ್ದಾನೆ. ಹೀಗಾಗಿ ಚಿಕ್ಕಬಳ್ಳಾಪುರ ತಾಲೂಕಿನ ನಕ್ಕಲ ಬಚ್ಚಹಳ್ಳಿ ಹೊರವಲಯದಲ್ಲಿರುವ ಕೋಳಿ ಫಾರಂಗೆ ಜನರು ನೂರಾರು ಸಂಖ್ಯೆಯಲ್ಲಿ ಮುಗಿಬಿದ್ದು ಕೋಳಿಗಳನ್ನು ಖರೀದಿಸಿದರು.
ವಿಷಯ ತಿಳಿದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದಾಗ ಕೋಳಿ ಮಾರಾಟಕ್ಕೆ ಬ್ರೇಕ್ ಬಿದ್ದಿತು. ಪೊಲೀಸರು ಬರೋದಕ್ಕೆ ಮೊದಲೇ ಕೋಳಿ ಖರೀದಿ ಮಾಡಿದವರು ಭರ್ಜರಿಯಾಗಿ ಚಿಕನ್ ಮಾಡಿ ತಿಂದು ಖುಷಿ ಪಟ್ಟರೆ, ಕೋಳಿ ಸಿಗದವರು ಸಪ್ಪೆ ಮೊರೆ ಹಾಕಿಕೊಂಡ ಘಟನೆ ನಡೆಯಿತು.