Select Your Language

Notifications

webdunia
webdunia
webdunia
webdunia

ನಿಪ್ಪಾ ವೈರಸ್ ಕೊರೋನಾಗಿಂತಲೂ ಡೇಂಜರಸ್

ನಿಪ್ಪಾ ವೈರಸ್ ಕೊರೋನಾಗಿಂತಲೂ ಡೇಂಜರಸ್
ಬೆಂಗಳೂರು , ಗುರುವಾರ, 9 ಸೆಪ್ಟಂಬರ್ 2021 (12:17 IST)
ಬೆಂಗಳೂರು: ಕರ್ನಾಟಕದಲ್ಲಿ ಉದ್ಯೋಗ ಮಾಡುತ್ತಿರುವ, ವಿದ್ಯಾರ್ಥಿಗಳಾಗಿರುವ ಕೇರಳೀಯರು ಸದ್ಯಕ್ಕೆ ತಮ್ಮ ತವರಿಗೆ ಹೋಗುವುದು ಡೇಂಜರ್. ಹೀಗಂತ ಸ್ವತಃ ಸರ್ಕಾರವೇ ಎಚ್ಚರಿಕೆ ನೀಡಿದೆ.


ಕೇರಳದಲ್ಲಿ ಒಂದೆಡೆ ಕೊರೋನಾ ರುದ್ರತಾಂಡವವಾಡುತ್ತಿದ್ದರೆ, ಇನ್ನೊಂದೆಡೆ ಅದರ ದುಪ್ಪಟ್ಟು ಅಪಾಯಕಾರಿಯಾಗಿರುವ ‘ನಿಪ್ಪಾ ವೈರಸ್’ ಪ್ರಕರಣಗಳು ಕಂಡುಬಂದಿವೆ.

ಹೀಗಾಗಿ ಒಂದು ತಿಂಗಳ ಮಟ್ಟಿಗೆ ಕೇರಳದ ಕಡೆಗೆ ಪ್ರಯಾಣಿಸದಿರುವುದೇ ಉತ್ತಮ. ನಿಪ್ಪಾ ವೈರಸ್ ಕೊರೋನಾಗಿಂತಲೂ ಅಪಾಯಕಾರಿಯಾಗಿದ್ದು, ತಲೆನೋವು, ಸ್ನಾಯು ಸೆಳೆತ, ಜ್ವರ ಇತ್ಯಾದಿ ಇದರ ಲಕ್ಷಣಗಳಾಗಿವೆ. ಒಂದು ವೇಳೆ ಇಂತಹ ಲಕ್ಷಣಗಳು ಕಂಡುಬಂದರೆ ರೋಗಿಗಳ ಸ್ಯಾಂಪಲ್ ನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಬೇಕಾಗುತ್ತದೆ. ಹೀಗಾಗಿ ಅಪಾಯ ಮೈಮೇಲೆಳದುಕೊಳ್ಳದಿರುವುದೇ ಉತ್ತಮ ಎನ್ನುವುದು ಸರ್ಕಾರದ ಸಲಹೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊಡವೆ ನಿವಾರಿಸುತ್ತೆ ಬಹುಪಯೋಗಿ ಪುದೀನಾ