Select Your Language

Notifications

webdunia
webdunia
webdunia
webdunia

ಕೋವಿಡ್-19 ನಿಂದ ಲೈಂಗಿಕ ಸಾಮರ್ಥ್ಯ ಕುಸಿತ..?

ಕೋವಿಡ್-19 ನಿಂದ ಲೈಂಗಿಕ ಸಾಮರ್ಥ್ಯ ಕುಸಿತ..?
ನವದೆಹಲಿ , ಬುಧವಾರ, 1 ಸೆಪ್ಟಂಬರ್ 2021 (15:04 IST)
ನವದೆಹಲಿ : ಮೊದಲೇ ಕೋವಿಡ್ ಸೋಂಕಿನಿಂದ ಭಯಗೊಂಡಿರುವ ಜನರಲ್ಲಿ ಇನ್ನಷ್ಟು ಭೀತಿ ಮೂಡುವ ಅನೇಕ ಸಂಗತಿಗಳನ್ನು ಸಂಶೋಧಕರು ಹೊರಹಾಕುತ್ತಲೇ ಇದ್ದಾರೆ. ಕೋವಿಡ್ ಸೋಂಕಿನಿಂದಾಗಿ ಪುರುಷರಲ್ಲಿ ಲೈಂಗಿಕ ಸಾಮರ್ಥ್ಯ ಕ್ಷೀಣಿಸಲಿದೆ ಎಂದು ಅಮೆರಿಕದ ಮಿಯಾಮಿ ವಿವಿಯ ಸಂಶೋಧಕರ ತಂಡವೊಂದು ತಿಳಿಸಿದೆ.

ತಾವು ಅಧ್ಯಯನ ನಡೆಸಿದ ಮಂದಿಯಲ್ಲಿ ಒಬ್ಬರಲ್ಲಿ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡಿದ್ದರೂ ಅವರ ವೃಷಣದಲ್ಲಿ ಕೋವಿಡ್-19 ವೈರಸ್ ಇನ್ನೂ ಇದ್ದವು ಎಂದು ತಿಳಿಸಿದ್ದಾರೆ ಸಂಶೋಧಕರು.
ಇದೇ ವೇಳೆ ಇನ್ನೂ ಇಬ್ಬರು ಸೋಂಕಿತರಲ್ಲೂ ಸಹ ಲೈಂಗಿಕ ಸಾಮರ್ಥ್ಯ ಕ್ಷೀಣಿಸಿದ್ದು ಪರೀಕ್ಷೆ ವೇಳೆ ಕಂಡುಬಂದಿದ್ದಾಗಿ ಸಂಶೋಧಕರು ತಿಳಿಸಿದ್ದಾರೆ.  ಅಧ್ಯಯನ ಇನ್ನೂ ಆರಂಭಿಕ ಹಂತದಲ್ಲಿದ್ದು, ಕೋವಿಡ್-19 ಸೋಂಕಿನಿಂತ ಮೃತಪಟ್ಟ ಆರು ಮಂದಿಯ ವೃಷಣದ ಸ್ಯಾಂಪಲ್ಗಳನ್ನು ಸಂಗ್ರಹಿಸಿದ ಸಂಶೋಧನಾ ತಂಡದ ವರದಿ ಇದಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ಏರುತ್ತಿರುವ ಕೊರೋನಾ!