Select Your Language

Notifications

webdunia
webdunia
webdunia
webdunia

ಕೊರೋನಾ ಕರ್ಪ್ಯೂ: ಮನೆಯಲ್ಲೇ ಕೂತು ಏನು ಮಾಡಬಹುದು?

ಕೊರೋನಾ ಕರ್ಪ್ಯೂ: ಮನೆಯಲ್ಲೇ ಕೂತು ಏನು ಮಾಡಬಹುದು?
ಬೆಂಗಳೂರು , ಭಾನುವಾರ, 22 ಮಾರ್ಚ್ 2020 (09:14 IST)
ಬೆಂಗಳೂರು: ಕೊರೋನಾವೈರಸ್ ಹರಡದಂತೆ ಪ್ರಧಾನಿ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂ ಇಂದು ದಿನವಿಡೀ ಜಾರಿಯಲ್ಲಿರಲಿದೆ. ಭಾನುವಾರದ ದಿನ ಯಾವತ್ತಿನಂತೇ ಔಟಿಂಗ್ ಹೋಗಲು ಸಾಧ್ಯವಾಗದೇ ಇರುವಾಗ ಮನೆಯಲ್ಲೇ ಕೂತು ಏನು ಮಾಡಬಹುದು?


ಅಯ್ಯೋ ದಿನವಿಡೀ ಇಂದು ಮನೆಯಲ್ಲೇ ಕೂರಬೇಕಲ್ಲಾ ಎಂದು ಕೊರಗಬೇಡಿ. ಈ ದಿನವನ್ನು ನಿಮ್ಮ ಮನೆಯವರ ಜತೆ ಖುಷಿಯಾಗಿ, ಕ್ರಿಯಾತ್ಮಕವಾಗಿ ಕಳೆಯಲು ಬಳಸಿಕೊಳ್ಳಿ. ಇದರಿಂದ ದೇಶಕ್ಕೂ ಉತ್ತಮ, ನಿಮಗೂ ಉತ್ತಮ.

  • ಮನೆ ಕ್ಲೀನಿಂಗ್ ಮಾಡುವ ಕೆಲಸವಿದ್ದರೆ ಇಂದಿಗೆ ಮೀಸಲಿಡಿ.
  • ಗಂಡು ಮಕ್ಕಳು ಒಂದು ದಿನದ ಮಟ್ಟಿಗೆ ಹೆಣ್ಣು ಮಕ್ಕಳಿಗೆ ಅಡುಗೆ ಮನೆಯಿಂದ ಬ್ರೇಕ್ ಕೊಟ್ಟು ತಾವೇ ಅಡುಗೆ ಮಾಡಿ ಖುಷಿಪಡಬಹುದು.
  • ಮಕ್ಕಳೊಂದಿಗೆ ಮಕ್ಕಳಾಗಿ. ಪೈಂಟಿಗ್ ಮಾಡಿ, ಮನೆಯೊಳಗೇ ಆಡಬಹುದಾದ ಆಟವಾಡಿ.
  • ಕೊರೋನಾ ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಿ.
  • ಹೊಸ ಅಡುಗೆ, ಹೊಸ ರುಚಿ ಟ್ರೈ ಮಾಡಿ ಮನೆಯವರ ಜತೆ ಪ್ರಯೋಗ ಮಾಡಿ!
  • ಮನೆಯವರೆಲ್ಲಾ ಜತೆಯಾಗಿ ಕೂತು ಒಂದೊಳ್ಳೆ ಸಿನಿಮಾ ನೋಡಿ ಮನಸ್ಸೂ ಫ್ರೆಸ್ ಆಗುತ್ತೆ.
  • ಒಳ್ಳೆಯ ಪುಸ್ತಕ ಓದುವುದು, ಬರೆಯುವುದು ಏನಾದ್ರೂ ಟ್ರೈ ಮಾಡಿ ನೋಡಿ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಸಮಸ್ಯೆಯ ಕುರಿತು ಪೋಷಕರಿಗೆ ಹೇಗೆ ತಿಳಿಸಲಿ?