ಬೆಂಗಳೂರು: ಕೊರೋನಾ ಗಾಳಿಯ ಮೂಲಕವೂ ಹರಡಬಹುದು ಎಂದು ವಿಜ್ಞಾನಿಗಳು ಇದೀಗ ಹೇಳಿದ್ದಾರೆ. ಇದು ಕೊರೋನಾ ಬಗೆಗಿನ ಆತಂಕ ಹೆಚ್ಚಿಸಿದೆ. ಗಾಳಿಯಲ್ಲಿ ಕೊರೋನಾ ಬರದಂತೆ ತಡೆಯಲು ಏನು ಮಾಡಬೇಕು ನೋಡೋಣ.
ಕಿರಿದಾದ ಜನದಟ್ಟಣೆಯ, ಗಾಳಿ ಸಂಚಾರಕ್ಕೆ ಹೆಚ್ಚು ಅನುಕೂಲವಿಲ್ಲದ ಸ್ಥಳದಲ್ಲಿ ಹೆಚ್ಚು ಹೊತ್ತು ಇರುವುದರಿಂದ ಕೊರೋನಾ ಹರಡಬಹುದು. ಹೀಗಾಗಿ ಇದನ್ನು ಅವಾಯ್ಡ್ ಮಾಡಿ.
ಮುಚ್ಚಿದ ಕೋಣೆಯಲ್ಲಿ ಇರುವುದರ ಬದಲು ಜನದಟ್ಟಣೆ ಇರುವಾಗ ಕೋಣೆಯ ಕಿಟಿಕಿ, ಬಾಗಿಲುಗಳನ್ನು ತೆರೆದಿಡಿ. ಆದಷ್ಟು ನಿಮ್ಮ ಸುತ್ತಮುತ್ತ ಜನರಿರುವಾಗ ಎಸಿ, ಫ್ಯಾನ್ ಗಾಳಿ ಆಫ್ ಮಾಡಿ ಹೊರಗಿನ ಗಾಳಿ ಹರಿದಾಡಲು ಅವಕಾಶ ಮಾಡಿಕೊಡಿ. ಲಿಫ್ಟ್ ಬಳಕೆ ಕಡಿಮೆ ಮಾಡಿ. ಎಲ್ಲಕ್ಕಿಂತ ಮುಖ್ಯವಾಗಿ ಜನರ ಜತೆ ಬೆರೆಯುವ ಅನಿವಾರ್ಯತೆಯಿದ್ದಾಗ ಸುರಕ್ಷಿತ ಮಾಸ್ಕ್ ಧರಿಸಿ.