Select Your Language

Notifications

webdunia
webdunia
webdunia
webdunia

ಕೊರೋನಾ ತಡೆಗೆ ಸರಕಾರಿ ಕಚೇರಿಗಳಲ್ಲಿ ಮಾಡಿದ ಉಪಾಯವೇನು ಗೊತ್ತಾ?

ಕೊರೋನಾ ತಡೆಗೆ ಸರಕಾರಿ ಕಚೇರಿಗಳಲ್ಲಿ ಮಾಡಿದ ಉಪಾಯವೇನು ಗೊತ್ತಾ?
ಬೆಂಗಳೂರು , ಭಾನುವಾರ, 22 ಮಾರ್ಚ್ 2020 (09:32 IST)
ಬೆಂಗಳೂರು: ಕೊರೋನಾವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಬೆಂಗಳೂರು ಒನ್ ಸೇರಿದಂತೆ ಜನರು ನೇರವಾಗಿ ವ್ಯವಹರಿಸುವ ಕೇಂದ್ರದಲ್ಲಿ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.


ಬೆಂಗಳೂರು ಒನ್ ಕಚೇರಿಗಳಲ್ಲಿ ಬಿಲ್ ಪಾವತಿಸಲು ಬರುವ ಗ್ರಾಹಕರಿಂದ ಒಂದು ಮೀಟರ್ ಅಂತರ ಕಾಯ್ದುಕೊಳ್ಳಲು ಸಿಬ್ಬಂದಿಗಳು ತಮ್ಮ ಟೇಬಲ್ ನ ಎದುರು ಕುರ್ಚಿಗಳನ್ನು ಇಟ್ಟು ಅಂತರ ಸೃಷ್ಟಿಸಿಕೊಂಡಿದ್ದಾರೆ.

ಈ ಮೂಲಕ ಗ್ರಾಹಕರಿಂದ ಒಂದು ಮೀಟರ್ ಅಂತರ ಕಾಯ್ದುಕೊಳ್ಳಲು ಉಪಾಯ ಹೂಡಿದ್ದಾರೆ. ಇನ್ನು ಕೆಲವೆಡೆ ಮಾಸ್ಕ್ ಧರಿಸಿಯೇ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದು, ಏನೇ ಬಿಲ್ ಗಳು, ಹಣ ಕೊಡುವುದಿದ್ದರೂ ನೇರವಾಗಿ ಕೈಗೆ ಕೊಡದೇ ಟೇಬಲ್ ಮೇಲಿಡಲು ಸೂಚಿಸುತ್ತಿದ್ದಾರೆ. ಆ ಮೂಲಕ ಕೈ ಸ್ಪರ್ಶಿಸುವುದನ್ನು ಅವಾಯ್ಡ್ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಸಮಸ್ಯೆಯ ಕುರಿತು ಪೋಷಕರಿಗೆ ಹೇಗೆ ತಿಳಿಸಲಿ?