Normal 0 false false false EN-US X-NONE X-NONE ಮೈಸೂರು : ರಾಜ್ಯದೆಲ್ಲೆಡೆ ರಣಕೇಕೆ ಹಾಕುತ್ತಿರುವ ಕೊರೊನಾ ವೈರಸ್ ಇದೀಗ ಮೈಸೂರು ಅರಮನೆಗೂ ಕಂಟಕವನ್ನುಂಟುಮಾಡಿದೆ. ಅರಮನೆ ಒಂಟೆ ಪಾಲಕನ ಮಗನಿಗೆ ಕೊರೊನಾ ಸೋಂಕು ತಗುಲಿದ್ದು, ಈ ಹಿನ್ನಲೆಯಲ್ಲಿ ಮೈಸೂರು ಅರಮನೆಗೆ ನಾಳೆ ಸ್ಯಾನಿಟೈಸ್ ಮಾಡಲಾಗುವುದು. ಹಾಗೇ ಅರಮನೆ ಪ್ರಾಣಿಪಾಲಕರ ಮನೆಗೂ ಸ್ಯಾನಿಟೈಸ್ ಮಾಡಲಾಗುವುದು. ಆದಕಾರಣ ಅರಮನೆಗೆ 3 ದಿನ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಿದ್ದು, ಅರಮನೆ ಮೂರು ದಿನ ಬಂದ್ ಮಾಡಲಾಗುವುದು ಎನ್ನಲಾಗಿದೆ.