Publish Date: Wed, 10 Jun 2020 (09:49 IST)
Updated Date: Wed, 10 Jun 2020 (09:50 IST)
ನವದೆಹಲಿ: ತೀವ್ರ ಜ್ವರ ಮತ್ತು ಗಂಟಲು ನೋವಿನಿಂದ ಬಳಲುತ್ತಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮೊನ್ನೆಯಷ್ಟೇ ಕೊರೋನಾ ಟೆಸ್ಟ್ ಗೊಳಗಾಗಿದ್ದರು.
ಅವರ ಕೊರೋನಾ ಪರೀಕ್ಷೆ ಫಲಿತಾಂಶ ನಿನ್ನೆ ರಾತ್ರಿ ವೇಳೆ ಹೊರಬಂದಿದ್ದು, ನೆಗೆಟಿವ್ ಎಂದು ಬಂದಿದೆ. ಹೀಗಾಗಿ ಕೇಜ್ರಿವಾಲ್ ನಿಟ್ಟುಸಿರುವ ಬಿಡುವಂತಾಗಿದೆ. ಅನಾರೋಗ್ಯಕ್ಕೀಡಾದ ತಕ್ಷಣ ಮುಂಜಾಗ್ರತಾ ಕ್ರಮವಾಗಿ ಕೇಜ್ರಿವಾಲ್ ಸ್ವಯಂ ಕ್ವಾರಂಟೈನ್ ಗೊಳಗಾಗಿದ್ದರು.