ಹೊಸ ಸೋಂಕಿತರ ಸಂಖ್ಯೆ 39 ಸಾವಿರ, 491 ಸಾವು!

Webdunia
ಸೋಮವಾರ, 9 ಆಗಸ್ಟ್ 2021 (08:45 IST)
ನವದೆಹಲಿ(ಆ.09): ಕೊರೋನಾ ವೈರಸ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ಡೆಲ್ಟಾ ಪ್ಲಸ್ ವೈರಸ್ ಕೂಡ ಕಾಣಿಸಿಕೊಳ್ಳುತ್ತಿದೆ. ಇಂದು ದೇಶದ ಹೊಸ ಕೊರೋನ  ಸಂಖ್ಯೆ 39,070 , ಇನ್ನು 491 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.

ಇದರ ಜೊತೆಗೆ ದೇಶದಲ್ಲಿ ಕೊರೋನಾ ಲಸಿಕೆ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಲಾಗಿದೆ. ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಭಾಗವಾಗಿ, ಭಾರತ ಸರಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ ಲಸಿಕೆಗಳನ್ನು ಉಚಿತವಾಗಿ ಒದಗಿಸುವ ಮೂಲಕ ಬೆಂಬಲ ನೀಡುತ್ತಿದೆ. ಕೋವಿಡ್-19 ಲಸಿಕೆ ಅಭಿಯಾನದ ಸಾರ್ವತ್ರೀಕರಣದ ಹೊಸ ಹಂತದಲ್ಲಿ, ದೇಶದಲ್ಲಿ ಲಸಿಕೆ ತಯಾರಕರು ಉತ್ಪಾದಿಸುತ್ತಿರುವ ಲಸಿಕೆಗಳಲ್ಲಿ ಶೇ.75ರಷ್ಟನ್ನು ಕೇಂದ್ರ ಸರಕಾರವೇ ಖರೀದಿಸಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ (ಉಚಿತವಾಗಿ) ಪೂರೈಕೆ ಮಾಡುತ್ತಿದೆ.
ಇಲ್ಲಿಯವರೆಗೆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಎಲ್ಲಾ ಮೂಲಗಳ ಮೂಲಕ 52.37ಕೋಟಿಗಿಂತಲೂ ಅಧಿಕ (52,37,50,890) ಲಸಿಕೆ ಡೋಸ್ಗಳನ್ನು ಒದಗಿಸಲಾಗಿದೆ ಮತ್ತು ಇನ್ನೂ 8,99,260 ಡೋಸ್ಗಳು ಪೂರೈಕೆ ಹಂತದಲ್ಲಿವೆ. 
ಈ ಪೈಕಿ, ವ್ಯರ್ಥವಾದ ಲಸಿಕೆಗಳೂ ಸೇರಿದಂತೆ ಒಟ್ಟು 50,32,77,942 ಡೋಸ್ಗಳನ್ನು ಬಳಕೆ ಮಾಡಲಾಗಿದೆ  ಉಳಿಕೆಯಾದ ಮತ್ತು ಬಳಕೆಯಾಗದ ಇನ್ನೂ 2.42 ಕೋಟಿಗೂ ಅಧಿಕ (2,42,87,160) ಕೋವಿಡ್ ಲಸಿಕೆ ಡೋಸ್ಗಳು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳ ಬಳಿ ಲಭ್ಯವಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗ್ರಾಸ್ಟ್ರಿಕ್ ಸಮಸ್ಯೆಗೆ ಅಯುಷ್ಯ ಮಂಡಲಂನ ಅನುಷ್ಕಾರ ಈ ವಿಧಾನ ಅನುಸರಿಸಿ

ಈ ಎಲ್ಲಾ ಆರೋಗ್ಯ ಸಮಸ್ಯೆ ಇರುವವರು ಈರುಳ್ಳಿ ತಿನ್ನಬಾರದು

ತೂಕ ಇಳಿಕೆಗೆ ಆಹಾರ ಮಾತ್ರವಲ್ಲ, ಈ ಮೂರು ಹಂತಗಳನ್ನು ತಪ್ಪದೇ ಅನುಸರಿಸಿ

ಅತಿಯಾಗಿ ಸೀನು ಬರುತ್ತಿದ್ದರೆ ಏನು ಮಾಡಬೇಕು

ಈ ಹರ್ಬಲ್ ಟೀಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿ, ಆಮೇಲೆ ಮ್ಯಾಜಿಕ್ ನೋಡಿ

ಮುಂದಿನ ಸುದ್ದಿ
Show comments