Publish Date: Thu, 01 Feb 2018 (10:06 IST)
Updated Date: Thu, 01 Feb 2018 (10:11 IST)
ನವದೆಹಲಿ: 2018-19 ನೇ ಸಾಲಿನ ಬಜೆಟ್ ಮಂಡಿಸಲು ಹಣಕಾಸು ಸಚಿವಾಲಯದಿಂದ ಸಂಸತ್ತಿನತ್ತ ವಿತ್ತ ಸಚಿವ ಅರುಣ್ ಜೇಟ್ಲಿ ಪ್ರಯಾಣ ಬೆಳೆಸಿದ್ದಾರೆ.
ವಿತ್ತ ಸಚಿವ ಅರುಣ್ ಜೇಟ್ಲಿಗೆ ರಾಜ್ಯ ಖಾತೆ ಹಣಕಾಸು ಸಚಿವರೂ ಜತೆಯಾಗಿದ್ದಾರೆ. ಈಗಾಗಲೇ ಸಚಿವರು ಮಂಡಿಸಲಿರುವ ಬಜೆಟ್ ಪ್ರತಿ ಸಂಸತ್ತಿಗೆ ತಲುಪಿದೆ.
ಬಿಗಿ ಭದ್ರತೆಯ ನಡುವೆ ವಿತ್ತ ಸಚಿವರು ಸಂಸತ್ತಿಗೆ ಆಗಮಿಸಿದ್ದಾರೆ. ಮೊದಲು ಸಂಸತ್ ಭವನದಲ್ಲಿ ಕ್ಯಾಬಿನೆಟ್ ಸಭೆ ನಡೆಸಲಿದ್ದಾರೆ. ಬಳಿಕ 11 ಗಂಟೆಗೆ ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ಜೇಟ್ಲಿ ಲೆಕ್ಕದಲ್ಲಿ ಯಾರಿಗೆ ಸಿಹಿ, ಯಾರಿಗೆ ಕಹಿ ಎನ್ನುವುದಕ್ಕೆ ಕೆಲವೇ ಕ್ಷಣಗಳಲ್ಲಿ ಉತ್ತರ ಸಿಕ್ಕಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ