Select Your Language

Notifications

webdunia
webdunia
webdunia
webdunia

‘ಒಂದು ಲಕ್ಷ ಜನ ಸಪೋರ್ಟ್ ಮಾಡಿದ್ರೆ ‘ಸಂಭೋಗ’ಕ್ಕೆ ಗ್ರೀನ್ ಸಿಗ್ನಲ್’

‘ಒಂದು ಲಕ್ಷ ಜನ ಸಪೋರ್ಟ್ ಮಾಡಿದ್ರೆ ‘ಸಂಭೋಗ’ಕ್ಕೆ ಗ್ರೀನ್ ಸಿಗ್ನಲ್’
NewDelhi , ಶನಿವಾರ, 24 ಜೂನ್ 2017 (11:27 IST)
ನವದೆಹಲಿ: ಶಾರುಖ್ ಖಾನ್ ಅಭಿನಯದ ‘ಜಬ್ ಹ್ಯಾರಿ ಮೆಟ್ ಸೆಜಾಲೋ’ ಚಿತ್ರದ ಟ್ರೇಲರ್ ನಲ್ಲಿ ಬಳಕೆಯಾದ ‘ಸಂಭೋಗ’ (ಇಂಟರ್ ಕೋರ್ಸ್) ಶಬ್ಧ ಭಾರೀ ವಿವಾದಕ್ಕೆ ಕಾರಣವಾಗಿದ್ದು ಗೊತ್ತೇ ಇದೆ.

 
ಈ ಪದವನ್ನು ಟ್ರೇಲರ್ ನಿಂದ ಕಿತ್ತು ಹಾಕಲು ಚಿತ್ರ ತಂಡಕ್ಕೆ ಸೆನ್ಸಾರ್ ಮಂಡಳಿ ಸೂಚಿಸಿತ್ತು. ಆದರೆ ಚಿತ್ರ ತಂಡ ಆ ಪದವನ್ನು ಅಷ್ಟು ಸುಲಭವಾಗಿ ಕಿತ್ತು ಹಾಕಲು ತಯಾರಿಲ್ಲ.

ಹೀಗಾಗಿ ಸೆನ್ಸಾರ್ ಮಂಡಳಿ ಒಂದು ಷರತ್ತು ವಿಧಿಸಿದೆ. ಒಂದು ಲಕ್ಷ ಜನರಿಂದ ಈ ಶಬ್ಧವನ್ನು ಬಳಸಬಹುದು ಎಂದು ಒಪ್ಪಿಗೆ ಸಹಿ ಹಾಕಿಸಿ ತನ್ನಿ. ಹಾಗಿದ್ದರೆ ಆ ಪದ ಬಳಕೆಗೆ ತಕಾರಾರು ಮಾಡುವುದಿಲ್ಲ ಎಂದು ಸೆನ್ಸಾರ್ ಮಂಡಳಿ ಅಧ್ಯಕ್ಷ ಪಹ್ಲಾಜ್  ನಿಹ್ಲಾನಿ ಹೇಳದ್ದಾರೆ.

ಸೆನ್ಸಾರ್ ಮಂಡಳಿ ಆಕ್ಷೇಪ ಎತ್ತಿರುವುದರಿಂದ ಟ್ರೇಲರ್ ಕೇವಲ ಅಂತರ್ಜಾಲದಲ್ಲಿ ಮಾತ್ರ ಓಡಾಡುತ್ತಿದೆ. ಟಿವಿಯಲ್ಲಿ ಪ್ರಸಾರ ಮಾಡಲಾಗುತ್ತಿಲ್ಲ. ಚಿತ್ರತಂಡ ಇದೀಗ ಸೆನ್ಸಾರ್ ಮಂಡಳಿಗೆ ಉತ್ತರಿಸಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಜಮೌಳಿ ಬಾಹುಬಲಿ-3 ಎಂದಿದ್ದಕ್ಕೆ ಪ್ರಭಾಸ್ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ..?