ಸ್ಯಾಂಡಲ್‌ವುಡ್ ನಟ ಯಶ್ ಮತ್ತು ರಾಧಿಕಾ ಪಂಡಿತ ಮೊದಲ ಬಾರಿಗೆ ತಮ್ಮ ಪ್ರೀತಿಯ ಗುಟ್ಟನ್ನು ರಟ್ಟು ಮಾಡಿದ್ದಾರೆ. ಪ್ರೀತಿಯಲ್ಲಿ ಬಿದ್ದ ವಿಚಾರ, ರಾಧಿಕಾಗೆ ಪ್ರಪೋಸ್ ಮಾಡಿದ್ದು ಹೇಗೆ ಎಂದು ತಮ್ಮಿಬ್ಬರ ಪ್ರೀತಿಯ ಹೇಗಾಯಿತು ಎಂಬುದರ ಕುರಿತು ವಿವರಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು ನಾನು ಮತ್ತು ರಾಧಿಕಾ 10 ವರ್ಷದಿಂದ ಉತ್ತಮ ಸ್ನೇಹಿತರಾಗಿದ್ದೇವು... ಬಹಳಷ್ಟು ಜನರು ಸಿರಿಯಲ್ ನಿಂದಲೇ ನಮ್ಮಿಬ್ಬರ ಮಧ್ಯೆ ಲವ್ ಆಗಿದೆ ಎಂದು ಭಾವಿಸಿದ್ದರು. ಆದ್ರೆ ನಮ್ಮಿಬ್ಬರಲ್ಲಿ ಆ ವೇಳೆ ಲವ್ ಆಗಿರಲಿಲ್ಲ. ಬರೀ ಸ್ನೇಹವಷ್ಟೇ ಇತ್ತು. ಆದರೆ ರಾಧಿಕಾ ಮತ್ತು ನನ್ನ ಮಧ್ಯೆ ಪ್ರೀತಿ ಆಗಿದ್ದು 5 ವರ್ಷಗಳ ಹಿಂದೆ ಎಂದು ಹಿಂದಿನ ಕಥೆಯನ್ನು ನಟ ಯಶ ತಿಳಿಸಿದ್ದಾರೆ.
ಯಶ್ ನನಗೆ ಫೋನ್ ಮಾಡಿ ಪ್ರಪೋಸ್ ಮಾಡಿದ್ರು.. ನಾನು ಹೆಚ್ಚಾಗಿ ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಂಡಿಲ್ಲ. ಅಲ್ದೇ ಸಿನಿಮಾವನ್ನು ಅಷ್ಟು ಸುಲಭವಾಗಿ ಒಪ್ಪುವುದಿಲ್ಲ. ಇದು ನನ್ನ ಲೈಫ್ ಪ್ರಶ್ನೆ, ನಮ್ಮಿಬ್ಬರ ಕೆಮೆಸ್ಟ್ರಿ ಮ್ಯಾಚ್ ಆದ ಕಾರಣ ಯಶ್ ಪ್ರಪೋಸ್ ಒಪ್ಪಿದೆ. ಬಹಳ ಸಮಯದ ಬಳಿಕ ಯಶ್ ಅವರನ್ನು ಜೀವನ ಸಂಗಾತಿಯನ್ನಾಗಿ ಒಪ್ಪಿಕೊಂಡೆ ಎಂದು ರಾಧಿಕಾ ಹೇಳಿದರು.
ನಾವಿಬ್ಬರೂ ಪ್ರೀತಿಯಲ್ಲಿ ಇದ್ದರೂ ಎಲ್ಲಿಯೂ ತೋರಿಸಿಕೊಂಡಿಲ್ಲ. ನಾವು ಜವಾಬ್ದಾರಿಯುವ ಸ್ಥಾನದಲ್ಲಿ ಇದ್ದ ಕಾರಣ ಸಿನಿಮಾ ಸೆಟ್‍ನಲ್ಲಿ ನಾವು ಕಲಾವಿದರಾಗಿಯೇ ಇದ್ದೇವು. ಆದರೆ ನಾವಿಬ್ಬರು ಪ್ರೇಮಿಗಳೆಂದು ತಿಳಿದು ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿಯಲ್ಲಿ ವಿಶೇಷ ದೃಶ್ಯವನ್ನು ಸೃಷ್ಟಿಸಲಾಗಿತ್ತು ಎಂದು ರಾಧಿಕಾ ಪಂಡಿತ್ ವಿವರಿಸಿದರು.
ಎರಡು ಕುಟುಂಬಗಳು ಒಪ್ಪಿಕೊಂಡ ಬಳಿಕವೇ ನಮ್ಮ ಮದುವೆ ಎಲ್ಲರ ಸಮ್ಮುಖದಲ್ಲೇ ನೆರವೇರಲಿದೆ. ಇದೀಗ ಎಂಗೇಜ್‌ಮೆಂಟ್ ಆಗಿದೆ ಎಂದು ಯಶ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ