ನಾವಿಬ್ಬರೂ ಜವಾಬ್ದಾರಿಯುತ ಸ್ಥಾನದಲ್ಲಿದ್ದೇವೆ. ನಮ್ಮ ಪ್ರೀತಿಯ ವಿಷಯವನ್ನು ಎಲ್ಲಿಯೂ ತೋರ್ಪಡಿಸಿಕೊಂಡಿಲ್ಲ... ಸಿನಿಮಾ ಸೆಟ್‌ನಲ್ಲಿ ನಾವು ಕಲಾವಿದರಾಗಿಯೇ ಇದ್ದೇವು. ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿಯಲ್ಲಿ ನಾವಿಬ್ಬರು ಲವರ್ಸ್ ಎಂದು ಭಾವಿಸಿ ವಿಶೇಷ ದೃಶ್ಯವನ್ನು ಸೃಷ್ಟಿ ಮಾಡಲಾಗಿತ್ತು ಎಂದು ರಾಧಿಕಾ ಪಂಡಿತ ವಿವರಿಸಿದರು.
ಮದುವೆ ಬಳಿಕ ಸಿನಿಮಾದಲ್ಲಿ ನಟಿಸುತ್ತೇನೆ.. ಮದುವೆ ಆದ ಹೆಣ್ಣು ಮನೆಯಲ್ಲೇ ಇರಬೇಕು ಎಂಬ ಕಾಲದಲ್ಲಿ ನಾವಿಲ್ಲ ಎಂದರು , ಈ ವೇಳೆ ಮಾತನಾಡಿದ ಯಶ್ ರಾಧಿಕಾ ತಮ್ಮ ಪ್ರತಿಭೆಯಿಂದಲೇ ಮುಂದೆ ಬಂದವರು, ನಮ್ಮಿಬ್ಬರಿಗೂ ಈ ವೃತ್ತಿ ಇಷ್ಟ. ಆದ್ದರಿಂದ ಮದುವೆ ಬಳಿಕವು ರಾಧಿಕಾ ಸಿನಿಮಾದಲ್ಲಿ ತೊಡಗಿಸಿಕೊಳ್ಳಲಿದ್ದಾಳೆ ಎಂದರು.
ಎರಡು ಕುಟುಂಬಗಳು ಒಪ್ಪಿಕೊಂಡ ಬಳಿಕವೇ ನಮ್ಮ ಮದುವೆ ಎಲ್ಲರ ಸಮ್ಮುಖದಲ್ಲೇ ನೆರವೇರಲಿದೆ. ಇದೀಗ ಎಂಗೇಜ್‌ಮೆಂಟ್ ಆಗಿದೆ ಎಂದು ಯಶ್ ತಿಳಿಸಿದ್ದಾರೆ.
ಗೋವಾದಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿರುವುದರ ಕುರಿತು ಟೀಕೆ ವ್ಯಕ್ತವಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಟೀಕೆಗೆ ತಲೆ ಕೆಡಿಸಿಕೊಂಡಿಲ್ಲ, ಮಹಾದಾಯಿ ನೀರು ಹಂಚಿಕೆಯಲ್ಲಿ ಉತ್ತರ ಕರ್ನಾಟಕ ಜನತೆಯನ್ನು ಬೆಂಬಲಿಸುವ ಯಶ್, ನಮ್ಮ ನಾಡಿನ ವಿಚಾರ ಬಂದಾಗ ನಾನು ಮುಂದೆ ನಿಂತು ನಮ್ಮ ಜನರನ್ನು ಬೆಂಬಲಿಸುತ್ತೇನೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ನಾನು ಪಾಕಿಸ್ತಾನದಲ್ಲಿ ಹೋಗಿ ಎಂಗೇಜ್‌ಮೆಂಟ್ ಮಾಡಿಕೊಂಡಿಲ್, ಆದ್ದರಿಂದ ಇದಕ್ಕಾಗಿ ತಲೆಕೆಡಿಸಿಕೊಂಡಿಲ್ಲ ಎಂದರು.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ