ದಬ್ಬಾಂಗ್ ಖಾನ್ ಸಲ್ಮಾನ್ ಖಾನ್ ಮತ್ತೆ ಸುದ್ದಿಯಾಗಿದ್ದಾರೆ. ಅದು ಮದುವೆ ವಿಚಾರಕ್ಕಾಗಿ. ಸಲ್ಮಾನ್ ಖಾನ್ ತಮ್ಮ ಗರ್ಲ್‌ಫ್ರೆಂಡ್ ಲೂಲಿಯಾ ವೆಂಟೂರ್ ಜತೆಗೆ ಈಗಾಗ್ಲೇ ಮದುವೆಯಾಗಿದ್ದಾರಂತೆ. ಹೀಗಂತ ರೋಮೆನಿಯನ್ ಟ್ಯಾಬ್ಲಾಯ್ಡ್ ಪತ್ರಿಕೆಯೊಂದು ಹೇಳಿದೆ.
ಕೆಲ ದಿನಗಳಿಂದ ಸಲ್ಮಾನ್ ಮತ್ತು ಲೂಲಿಯಾ ಒಟ್ಟಿಗೆ ಓಡಾಡುತ್ತಿರುವುದು ನಿಮಗೆಲ್ಲರಿಗೂ ಗೊತ್ತು. ಇಬ್ಬರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ವದಂತಿ ಬೆನ್ನೆಲ್ಲೇ ಇದೀಗ ಮತ್ತೊಂದು ಗಾಸಿಪ್ ಕೇಳಿ ಬರುತ್ತಿದೆ.ಸಲ್ಮಾನ್ ಖಾನ್ ಲೂಲಿಯಾ ಜತೆಗೆ ಈಗಾಗ್ಲೇ ಮದುವೆಯಾಗಿದ್ದಾರಂತೆ..
ಹೀಗಂತ ರೋಮೆನಿಯನ್ ಟ್ಯಾಬ್ಲೆಯ್ಡ್ ತಿಳಿಸಿದೆ.
ರೋಮೆನಿಯನ್ ಬ್ಯೂಟಿ ಸಲ್ಲು ಮನೆಗೆ ಬಂದಿದ್ದಾರೆ. ಟ್ಯಾಬ್ಲಾಯ್ಡ್ ಪ್ರಕಾರ ಲೂಲಿಯಾರನ್ನು 'ಶ್ರೀಮತಿ ಲೂಲಿಯಾ' ಎಂದು ಹೇಳಿದೆ. ಅಂದ್ರೆ 'ರಾಯಲ್ ಶ್ರೀಮತಿ ಖಾನ್' ಎಂದರ್ಥ. ಇನ್ನೂ ಸಲ್ಲು ಹಾಗೂ ಲೂಲಿಯಾ ಮದುವೆ ಈಗಾಗ್ಲೇ ಆಗಿದೆ ಎನ್ನೋ ಸುದ್ದಿಗೆ ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ರೆ, ಮತ್ತೆ ಕೆಲವರು ಇದೆಲ್ಲಾ ಹೇಗೆ ಸಾಧ್ಯ ಎನ್ನುತ್ತಿದ್ದಾರಂತೆ.