ನಟ ಕಮಲ ಹಾಸನ್ ಕುಟುಂಬದಲ್ಲಿ ಪುತ್ರಿ ಶೃತಿ ಹಾಸನ್ ಹಾಗೂ ಹಾಸನ್ ಗರ್ಲ್‌ಫ್ರೆಂಡ್ ಮಧ್ಯದ ಜಗಳ ಇದೀಗ ಎಲ್ಲೆಡೆ ಸುದ್ದಿಗೆ ಗ್ರಾಸವಾಗಿದೆ. ಕಮಲ್ ಹಾಸನ್ ಪುತ್ರಿ ಶಡತಿ ಹಾಗೂ ಗರ್ಲ್‌ಫ್ರೆಂಡ್ ಮಧ್ಯೆದ ಜಗಳ ಎಲ್ಲಾ ಕಡೆಗಳಲ್ಲಿ ಸುದ್ದಿ ಮಾಡುತ್ತಿದೆ.
ಕಮಲ್ ಹಾಸನ್ ಪತ್ನಿ ಸಾರಿಕಾ ಪುತ್ರಿ ಶೃತಿ ಹಾಸನ್ ಹಾಗೂ ಹಾಸನ್ ಪತ್ನಿ ಗೌತಮಿ ಇಬ್ಬರ ಮಧ್ಯ ಅಸಮಾಧಾನದ ಹೊಗೆಯಾಡುತ್ತಿದೆ ಎನ್ನಲಾಗುತ್ತಿದೆ.
ಕಮಲ್ ಹಾಸನ್ ಅಭಿನಯದ ಶುಭಾಷ್ ನಾಯ್ಡು ಚಿತ್ರದಲ್ಲಿ ಇಬ್ಬರು ಜತೆಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಗೌತಮಿ ಡಿಸೈನ್ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ. ಆದ್ರೆ ಅಮೇರಿಕಾದಲ್ಲಿ ನಡೆಯುತ್ತಿರುವ ಚಿತ್ರದ ಶೂಟಿಂಗ್‌ನಲ್ಲಿ ಇಬ್ಬರು ಕಾಸ್ಟ್ಯೂಮ್ಸ್ ವಿಷಯಕ್ಕೆ ಜಗಳವಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಶುಭಾಷ್ ನಾಯ್ಡು ಸಿನಿಮಾದ ಸೆಟ್‌ನಲ್ಲಿ ಕಮಲ್ ಹಾಸನ್ ಪುತ್ರಿ ಹಾಗೂ ನಾಯಕಿಯ ಮಧ್ಯೆ ಭಾರೀ ಜಗಳವಾಗಿದ್ದು, ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದರಿಂದ ಒಂದು ದಿನದ ಮಟ್ಟಿಗೆ ಶೂಟಿಂಗ್ ಕ್ಯಾನ್ಸಲ್ ಮಾಡಲಾಗಿತ್ತು. ಈ ಸಿನಿಮಾದಲ್ಲಿ ಗೌತಮಿ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಶೃತಿಗೆ ಗೌತಮಿ ಡಿಸೈನ್ ಮಾಡಿರುವ ಬಟ್ಟೆ ಹಾಕೋದಕ್ಕೆ ಇಷ್ಟವಿಲ್ಲ. ಆದರೆ ಸೆಟ್‌ನಲ್ಲಿ ಗೌತಮಿ ವಿನ್ಯಾಸ ಮಾಡಿರುವ ಬಟ್ಟೆ ಹಾಕುವಂತೆ ಹೇಳಲಾಗಿದೆ. ಆದರೆ ಇದನ್ನು ಒಪ್ಪಲು ರೆಡಿ ಇಲ್ಲದ ಶೃತಿ ಸೆಟ್‌ನಲ್ಲೇ ಜಗಳ ಮಾಡಿದ್ದಾರೆ ಎನ್ನಲಾಗುತ್ತಿದೆ.
ಆದ್ರೆ ಕಮಲ್ ಹಾಸನ್ ಮಾತ್ರ ಯಾರ ಪರವಾಗಿಯೂ ಮಾತನಾಡುತ್ತಿಲ್ಲವಂತೆ. ಗರ್ಲಫ್ರೆಂಡ್ ಹಾಗೂ ಪುತ್ರಿಯ ಪರವಾಗಿ ಮಾತನಾಡದೇ ಮೌನವಹಿಸಿದ್ದಾರೆ. ಆದ್ದರಿಂದ ಇಬ್ಬರ ಜಗಳದಿಂದ ಕಮಲ್ ಹಾಸನ್ ದೂರವೇ ಉಳಿದಿದ್ದಾರೆ ಎನ್ನಲಾಗುತ್ತಿದೆ.
ಆದ್ರೆ ಮತ್ತೊಂದು ಮೂಲಗಳ ಪ್ರಕಾರ ಗೌತಮಿ ಹಾಗೂ ಶೃತಿ ಇಬ್ಬರು ಕ್ಲೋಸ್ ಆಗಿದ್ದಾರೆ. ಇಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿ ಇಲ್ಲ ಎನ್ನುತ್ತಿದೆ ಮೂಲಗಳು.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ